ಕಾಸರಗೋಡು : ಹಿರಿಯ ಯಕ್ಷಗಾನ ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ (87) ಇವರು ದಿನಾಂಕ 29 ಜೂನ್ 2026ರಂದು ಮಧೂರುನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೂಡ್ಲು ನಾರಾಯಣ ಬಲ್ಯಾಯರಿಂದ ನಾಟ್ಯಾಭ್ಯಾಸ ಮಾಡಿದ್ದ ಅವರು ಹವ್ಯಾಸಿ ವೇಷಧಾರಿ, ಅರ್ಥಧಾರಿ, ಚೆಂಡೆ ಮದ್ದಳೆ ವಾದಕ, ಭಾಗವತರಾಗಿ ಪ್ರಸಿದ್ದಿ ಪಡೆದಿದ್ದರು. ವೈಶಾಲಿನಿ ಪರಿಣಯ (ಪೌರಾಣಿಕ), ದೂರ್ವಾಸಾತಿಥ್ಯ (ಪೌರಾಣಿಕ), ಶ್ರೀ ಧನ್ವಂತರಿ ಮಹಾತ್ಮ (ಪೌರಾಣಿಕ), ಕುಂಟಾರು ಕ್ಷೇತ್ರ ಮಹಾತ್ಮೆ, ನದಿಯಾಗಿ ಹರಿದ ನಂದಿನಿ (ಪೌರಾಣಿಕ), ದುಂಬಿಯಾಗಿ ನೆಗೆದ ಭ್ರಾಮರಿ ( ಪೌರಾಣಿಕ), ಪಾವಮಾನಿಯ ಪ್ರಣಯ ಲೀಲೆ (ಹಿಡಿಂಬಾ ವಿವಾಹ), ಮಧೂರ ಮಹಿಮೆ (ಕ್ಷೇತ್ರ ಮಹಿಮೆ) ಸಹಿತ ಹಲವಾರು ಪ್ರಸಂಗಗಳನ್ನು ಬರೆದಿದ್ದಾರೆ. ಸಾಂಪ್ರದಾಯಿಕ ಯಕ್ಷಗಾನ ಶೈಲಿಯಲ್ಲಿ ಪರಿಣತಿ ಹೊಂದಿರುವ ಇವರು ಯಕ್ಷಗಾನದ ತಳಮಟ್ಟದ ಬೆಳವಣಿಗೆಗೆ ಶ್ರಮಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವೃತ್ತಿಯಲ್ಲಿ ಮಾರಾಟ ತೆರಿಗೆ ಅಧಿಕಾರಿಯಾಗಿ ನಿವೃತ್ತರಾದವರು.
