ಬೆಂಗಳೂರು : ಗುರು ವೀರಭದ್ರ ನಾಯಕರ ಪರಂಪರೆಯ ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ದಿಟ್ಟ ಮಾರ್ಗದರ್ಶನದಲ್ಲಿ ಸಪ್ತ ದಿನಗಳ ‘ತಿತ್ತಿತೈ ಯಕ್ಷಗಾನ ಶಿಬಿರ’ವನ್ನು ದಿನಾಂಕ 13 ಮೇ 2026ರಿಂದ ಬೆಂಗಳೂರಿನ ಕನಕಪುರ ರೋಡ್ ಮೆಟ್ರೋ ಸ್ಟೇಷನ್ ಹತ್ತಿರ ವಾಜರಹಳ್ಳಿ ತಿತ್ತಿತೈ ಇಲ್ಲಿ ಆಯೋಜಿಲಾಗಿದೆ.
ಯಕ್ಷಗಾನದಲ್ಲಿ ಬರುವಂತಹ ಸಪ್ತ ತಾಳಗಳು, ರಂಗ ನಡೆಗಳು, ಪುರಾಣ ಸಾಹಿತ್ಯದ ಜ್ಞಾನ, ಪೌರಾಣಿಕ ಪ್ರಸಂಗದ ಪಾತ್ರ ಚಿತ್ರಣ, ಯಕ್ಷಗಾನದ ವೇಷಭೂಷಣ ಮತ್ತು ಬಣ್ಣಗಾರಿಗೆ ಕುರಿತಾಗಿ ಮಾಹಿತಿ ಮತ್ತು ತರಬೇತಿ ಶಿಬಿರ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ 6362673283 ಸಂಖ್ಯೆಯನ್ನು ಸಂಪರ್ಕಿಸಿರಿ. ಈ ಯಕ್ಷಗಾನ ಶಿಬಿರದ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಆಶಯ ನಮ್ಮದು.

