ಕಾಸರಗೋಡು : ಪೆರ್ಲ ಸಮೀಪದ ಬಳ್ಳಂಬೆಟ್ಟು ಶ್ರೀ ಪರಿವಾರ ಸಹಿತ ಶಾಸ್ತರ ದೇವಳದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ದಿನಾಂಕ 14 ಜನವರಿ 2025ರಂದು ಅಗರಿ ಭಾಗವತ ವಿರಚಿತ ‘ಶಾಂಭವಿ ವಿಲಾಸ’ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಗಿರೀಶ್ ರೈ ಕಕ್ಕೆಪದವು, ಶ್ರೇಯಾ ಆಚಾರ್ಯ ಆಲಂಕಾರು, ಪದ್ಮನಾಭ ಉಪಾಧ್ಯಾಯ, ನೆಕ್ಕರೆಮೂಲೆ ಗಣೇಶ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಗಾಯತ್ರೀ ಹೆಬ್ಬಾರ್ (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ಶುಭಾ ಅಡಿಗ (ರಕ್ತಬೀಜ ಮತ್ತು ಸುಗ್ರೀವ), ಕಿಶೋರಿ ದುಗ್ಗಪ್ಪ ನಡುಗಲ್ಲು (ಚಂಡ), ಶಾರದ ಅರಸ್ (ಮುಂಡ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಬದಿಯಡ್ಕ ಉದ್ಯಮಿ ಗಿರಿಧರ ಪೈ ಕಾರ್ಯಕ್ರಮ ಪ್ರಾಯೋಜಿಸಿದ್ದರು.