ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 29-05-2024ರಂದು ಸಂಜೆ 5-00 ಗಂಟೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನ ಕನ್ನಡ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಜಾನಪದ ವಿದ್ವಾಂಸರು ಸೃಜನಶೀಲ ಲೇಖಕರು ಆಗಿರುವ ಮೈಸೂರಿನ ಪ್ರೊ. ಕೃಷ್ಣಮೂರ್ತಿ ಹನೂರ, ಖ್ಯಾತ ಕವಿಗಳು ಬರಹಗಾರರು ಆಗಿರುವ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಶ್ರೀ ಕೆ.ಪಿ. ರಾವ್ ಇವರುಗಳಿಗೆ ಹಾಗೂ ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ 75 ವರ್ಷಗಳ ಕಾಲ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಹೆಗ್ಗೋಡಿನ ನೀನಾಸಂ ಸಂಸ್ಥೆಗೆ ‘ಶಿವರಾಮ ಕಾರಂತ ಪ್ರಶಸ್ತಿ’ಯನ್ನು ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ವನ್ನು ಶ್ರೀಮತಿ ಎಚ್.ಆರ್. ಲೀಲಾವತಿಯವರ ಆತ್ಮ ಕಥನ – ‘ಹಾಡಾಗಿ ಹರಿದಾಳೆ’, ಪ್ರೊ. ಎಚ್.ಟಿ. ಪೋತೆಯವರ ‘ಅಂಬೇಡ್ಕರ್ ಮತ್ತು…’, ಡಾ. ಬಿ. ಜನಾರ್ದನ ಭಟ್ ಇವರ ‘ವಿನೂತನ ಕಥನ ಕಾರಣ’ ಹಾಗೂ ಡಾ.ನಿತ್ಯಾನಂದ ಬಿ. ಶೆಟ್ಟಿಯವರ ‘ಮಾರ್ಗಾನ್ವೇಷಣೆ’ ಎಂಬ ಕೃತಿಗಳಿಗೆ ನೀಡಲಾಗುವುದು.