ತೀರ್ಥಹಳ್ಳಿ : ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಇದರ ಸಾಂಸ್ಕೃತಿಕ ಸಮಿತಿ ವತಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ‘ಯಕ್ಷಧ್ರುವ ‘ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ‘ಶ್ರೀ ಹರಿ ಲೀಲಾಮೃತ’ ಎನ್ನುವ ಕಥಾ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 29 ನವೆಂಬರ್ 2024ರಂದು ಶುಕ್ರವಾರ ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ನಡೆಯಲಿದೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದೆದುರಿನ ಸಂಸ್ಕೃತಿ ಮಂದಿರದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಹಿರಿಯ ಸಹಕಾರಿಗಳಾಗಿರುವ ಡಾ. ಆರ್. ಎಂ. ಮಂಜುನಾಥ ಗೌಡ ವಿನಂತಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗುಡ್ಡೇಕೇರಿ ಕಾಳಿಂಗ ಫೌಂಡೇಶನ್ ಇದರ ಡಾ. ಗೌರಿಶಂಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ತಾಲೂಕಿನವರಾದ ಎಂ. ಕೆ. ರಮೇಶ್ ಆಚಾರ್ಯ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತ ಕೊಕ್ಕುಡ್ತಿ ಕೃಷ್ಣಮೂರ್ತಿ, ಯಕ್ಷ ಕಲಾವಿದರಾದ ಆಗುಂಬೆ ಮಂಜುನಾಥ ಗೌಡರು, ಗುಡ್ಡೇಕೇರಿ ಮೂರ್ತಿ ಗೌಡರು ಹಾಗೂ ಯಕ್ಷಗಾನ ಪ್ರಚಾರಕ ಮೈಕ್ ರಮೇಶ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮಾಜಿ. ಜಿ. ಪಂ. ಅಧ್ಯಕ್ಷ ಎಲ್ಲಪ್ಪ, ಮಾಜಿ ಜಿ. ಪಂ. ಸದಸ್ಯರಾದ ಹಾರೋಗೊಳಿಗೆ ಪದ್ಮನಾಬ್, ಮಾಜಿ ತಾ. ಪಂ. ಅಧ್ಯಕ್ಷೆ ಜೀನಾ ವಿಕ್ಟರ್ ಡಿಸೋಜ, ಮಾಜಿ ತಾ. ಪಂ. ಸದಸ್ಯ ಕಟ್ಟೇಹಕ್ಲು ಕಿರಣ್, ಪ. ಪಂ. ಉಪಾಧ್ಯಕ್ಷೆ ಗೀತಾ ರಮೇಶ್, ಪ. ಪಂ. ಸದಸ್ಯರಾದ ಶಬನಮ್, ರತ್ನಾಕರ ಶೆಟ್ಟಿ, ಬಿ. ಆರ್. ರಾಘವೇಂದ್ರ ಶೆಟ್ಟಿ, ವಿಲಿಯಂ ಮಾರ್ಟೀಸ್, ಕುರುವಳ್ಳಿ ನಾಗರಾಜ್, ಮುಖಂಡರಾದ ಮಟ್ಟಿನಮನೆ ರಾಮಚಂದ್ರ, ವಾದಿರಾಜ್, ಅಗಳಬಾಗಿಲು ಮಹೇಶ್, ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯ ಸಾಂಸ್ಕೃತಿಕ ಸಮಿತಿಯ ಮಧುಸೂದನ್ ಉಪಸ್ಥಿತರಿದ್ದರು.