ಕಾಸರಗೋಡು: ಹೊಸಕೋಟೆಯ ಶ್ರೀ ನವಚೇತನ ನೃತ್ಯ ಕಲಾ ಅಕಾಡೆಮಿಯ 48ನೇ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ದಿನಾಂಕ 23 ಆಗಸ್ಟ್ 2024ರಂದುಜರಗಿತು. ಈ ಸಂದರ್ಭದಲ್ಲಿ ಹೊರನಾಡ ಕನ್ನಡಿಗ ಸಾಧನೆಗಾಗಿ ಗುರುಪ್ರಸಾದ್ ಕೋಟೆಕಣಿ ಅವರನ್ನು `ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ನೀಡಿ ಸಮ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಂತಾರಾಜ್ಯ ನೃತ್ಯ ಪಟು ಗುರು ವಿದ್ವಾನ್ ಕೋಲಾರ ರಮೇಶ್, ಕೆಂಬಳಲುಪಾಳ್ಯ ಶ್ರೀ ನಾಗರಾಜು ಸ್ವಾಮಿ, ಕಲಾಶ್ರೀ ಗುರು ಸುಪರ್ಣ ವೆಂಕಟೇಶ್, ಬೆಂಗಳೂರು ಪೋಲೀಸ್ ವರಿಷ್ಠಾಧಿಕಾರಿ ಎ. ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಡಿ.ದೇವರಾಜ್, ಅಂತರಾಷ್ಟ್ರೀಯ ಗಾಯಕ ಗೊ. ನಾ. ಸ್ವಾಮಿ, ಅಖಿಲ ಭಾರತ ಜನಪದ ಒಕ್ಕೂಟ ಅಧ್ಯಕ್ಷ ಕೆ. ನಾಗರಾಜ್, ಎಂಡೇವರ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ಇಲ್ಲಿನ ಸಂಸ್ಥಾಪಕ ಎಂ. ಎಲ್. ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Comments are closed.