Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ‘ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರ’ ಲೋಕಾರ್ಪಣೆ
    Yakshagana

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ‘ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರ’ ಲೋಕಾರ್ಪಣೆ

    May 16, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಎನ್.ಎಂ.ಪಿ.ಎ. ಮಂಗಳೂರು (ಫೋರ್ಟ್ ಅಥಾರಿಟಿ ಸಂಸ್ಥೆಯು) ನೀಡಿದ ರೂ.15 ಲಕ್ಷ ರೂಪಾಯಿಗಳ ಸಿ.ಎಸ್.ಆರ್. ಫಂಡ್ ಮೂಲಕ ಯಕ್ಷಗಾನ ಪರ್ಫಾರ್ಮೆನ್ಸ್ ಹಾಲ್ ನಿರ್ಮಿಸಿದೆ. ಅದರಂತೆ ನೂತನವಾಗಿ ನಿರ್ಮಾಣಗೊಂಡ ಸಭಾಮಂದಿರಕ್ಕೆ ಬ್ರಹ್ಮೈಕ್ಯ ‘ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರ’ ಎಂದು ಹೆಸರಿಸಿ ದಿನಾಂಕ 12 ಮೇ 2026ರಂದು ಈ ಮಂದಿರವನ್ನು ಶ್ರೀ ಶೃಂಗೇರಿ ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರಾನಂದ ಭಾರತೀ ಮಹಾಸ್ವಾಮಿಗಳವರು ಇವರು ಲೋಕಾರ್ಪಣೆಗೈದು ಆಶೀರ್ವಚನ ಮೂಲಕ ಅನುಗ್ರಹಿಸಿದರು.

    “ಭಾರತೀಯ ಪರಂಪರೆಯಲ್ಲಿ ಕಲೆಗಳು ಕೇವಲ ಮನೋರಂಜನೆಯ ಕಲೆಗಳಾಗಿರದೆ ಸಮಾಜಕ್ಕೆ ಸಂಸ್ಕಾರವನ್ನು ಬೋಧಿಸುವ ಮಾಧ್ಯಮವಾಗಿದೆ. ಅದರಲ್ಲೂ ಯಕ್ಷಗಾನ ಕಲೆಯು, ವೇದ-ಪುರಾಣ ಕಥೆಗಳನ್ನು ಆಧರಿಸಿ ಅದರ ಪ್ರಧಾನ ಸಂದೇಶವನ್ನು ಸಮಾಜಕ್ಕೆ ಸಾರುತಿದೆ. ಪ್ರಧಾನವಾಗಿ ಮಾನವರಲ್ಲಿ ಬೇಕಾಗಿರುವುದು ಸಂಸ್ಕಾರ. ಸಂಸ್ಕಾರ ಹೊಂದಿದ ಮಾನವರು ನಿರ್ಭೀತಿಯಿಂದ ಜೀವನವನ್ನು ನಡೆಸಬಹುದು. ‌ಯಕ್ಷಗಾನಕ್ಕೆ ಪಾರಂಪರಿಕ ಹಿನ್ನೆಲೆ ಇದೆ. ಹಿರಿಯರು ನಡೆದು ಬಂದ ರೀತಿ, ಅವರ ಆದರ್ಶಗಳು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಅವರು ನೀಡಿದ ಕೊಡುಗೆ, ಅದನ್ನು ನೆನಪಿಸುತ್ತ ಇಂದಿನ ಜನಾಂಗ, ಅದೇ ತಳಹದಿಯ ಸಂಸ್ಕಾರವನ್ನು ಪೋಣಿಸಿ ಮುನ್ನಡೆಸಬೇಕು. ಈ ನಿಟ್ಟಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು, ಅಧ್ಯಕ್ಷರಾದ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರ ನೇತೃತ್ವದಲ್ಲಿ ಈ ಸಂಸ್ಥೆ ಯಕ್ಷಗಾನ ನಡೆದು ಬಂದ ರೀತಿ, ವೇಷಭೂಷಣಗಳ ವೈಶಿಷ್ಟ್ಯ, ಕೀರ್ತಿಶೇಷ ಕಲಾವಿದರುಗಳ ಕೊಡುಗೆ ಮುಂತಾದವುಗಳನ್ನು, ಗುರುತಿಸಿ ದಾಖಲಿಸಿ ಅಧ್ಯಯನಕ್ಕೆ ಸೀಮಿತಗೊಳಿಸಿದೆ. ಈ ರೀತಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನ ಪ್ರಯತ್ನಕ್ಕೆ ಶ್ರೀಮಠದ ಆಶೀರ್ವಾದ- ಸಹಕಾರ ನಿರಂತರ ನಿಮಗಿದೆ” ಎಂದು ಆಶೀರ್ವದಿಸಿದರು.

    ಬ್ರಹ್ಮಶ್ರೀ ಇರುವೈಲು ಕೃಷ್ಣ ದಾಸ ತಂತ್ರಿ, ಶ್ರೀ ಯೋಗೀಶ ಅಡಿಗ ಮತ್ತು ಬಳಗದವರು ಕುಂಬಳೆ ಶ್ರೀ ವಿನಯರಾಜ ಶೆಟ್ಟಿ ಉದ್ಯೋಗಿಗಳು ಎನ್.ಎಂ.ಪಿ.ಎ. ಮಂಗಳೂರು, ಮದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಶಾನುಭಾಗ್, ಪ್ರೊಫೆಸರ್ ಶ್ರೀನಾಥ ಕಾಸರಗೋಡು, ಶ್ರೀ ಶೀನ ಶೆಟ್ಟಿ ಕಜೆ, ಶ್ರೀ ಜಯಾನಂದ ಕುಮಾರ್ ಹೊಸದುರ್ಗ, ಶ್ರೀ ರವೀಂದ್ರ ರೈ ಸಿರಿಬಾಗಿಲು, ಶ್ರೀ ಶ್ಯಾಮ್ ಕುಂಚಿನಡ್ಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರು, ವಿವಿಧ ಭಜನಾ ಸಂಘಗಳ ಪದಾಧಿಕಾರಿಗಳು, ದಿವಂಗತ ಸಿರಿಬಾಗಿಲು ವೆಂಕಪ್ಪಯ್ಯನವರ ಮನೆಯ ಸದಸ್ಯರು ಊರ ಪರವೂರು ಹಲವಾರು ಗಣ್ಯರು ಭಾಗವಹಿಸಿ ಮಂತ್ರಾಕ್ಷತೆ ಸ್ವೀಕರಿಸಿದರು. ಶ್ರೀ ದಾಮೋದರ್ ಶರ್ಮ ಬಾರ್ಕೂರು ನಿರೂಪಿಸಿದರು. ಶ್ರೀ ರಾಜ ರಾಮರಾವ್ ಮೀಯಪದವು ಧನ್ಯವಾದವಿತ್ತರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅತಿಥಿಗಳನ್ನು ಸ್ವಾಗತಿಸಿದರು. ಗಡಿನಾಡು ಕಾಸರಗೋಡಿನ ಸಿರಿಬಾಗಿಲಿಗೆ ಜಗದ್ಗುರುಗಳ ಪಾದಸ್ಪರ್ಶದಿಂದ ಸಿರಿಬಾಗಿಲು ಹಾಗೂ ಸಿರಿಬಾಗಿಲು ಪ್ರತಿಷ್ಠಾನವು ಪವಿತ್ರವಾಯಿತು ಎಂದು ಪ್ರತಿಷ್ಠಾನವು ಸಂತಸವನ್ನು ವ್ಯಕ್ತಪಡಿಸಿತು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ‘ತಿಂಗಳ ನಾಟಕ ಸಂಭ್ರಮ’ | ಮೇ 16
    Next Article ಸುರತ್ಕಲ್ಲಿನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಸಂಗೀತ ಕಛೇರಿ ಮತ್ತು ಭರತನಾಟ್ಯ | ಮೇ 17
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026

    ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಾಮ ಸಂಕೀರ್ತನ ಕಾರ್ಯಾಗಾರ | ಜುಲೈ 18, 19, 25 ಮತ್ತು 26

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.