ಮಂಗಳೂರು : ಶುಭವರ್ಣ ಯಕ್ಷ ಸಂಪದ ಮರಕಡ ಮಂಗಳೂರು ಇದರ ಆಶ್ರಯದಲ್ಲಿ ಶುಭವರ್ಣ ಪುಸ್ತಕ ಮನೆ ಓದುಗರಿಗೊಂದು ಪುಟ್ಟ ನೆಲೆ ಆರಂಭ ಸಂಭ್ರಮ ಕಾರ್ಯಕ್ರಮವು ಮರಕಡ ಕುಮೇರು ಮನೆ ಶ್ರೀಮತಿ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮೃತಿ ಸೌಧದಲ್ಲಿ ದಿನಾಂಕ 15 ಮಾರ್ಚ್ 2026ರಂದು ನಡೆಯಿತು.
ಈ ವೇಳೆ ಮಾತನಾಡಿದ ಕುಳಾಯಿ ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೋಳ್ಯಾರು, “ಯಕ್ಷಗಾನ ಜೀವನದ ಪರಿಪೂರ್ಣತೆಯತ್ತ ಸಾಗಲು ಈ ವಾಚನಾಲಯ ಸ್ಥಾಪನೆ ಒಂದು ದೊಡ್ಡ ಹೆಜ್ಜೆ. ಎಲ್ಲಾ ಯಕ್ಷಗಾನ ಕೇಂದ್ರದಲ್ಲೂ ಇಂತಹ ಗ್ರಂಥಾಲಯವಿದ್ದರೆ ಯಕ್ಷಗಾನ ವಿದ್ಯಾರ್ಥಿಗೆ ಇನ್ನೂ ಬೆಳೆಯುವುದಕ್ಕೆ ಸಾಧ್ಯವಿದೆ” ಎಂದರು.

ಪ್ರಮುಖರಾದ ರವಿಚಂದ್ರ ಡಿ. ಶೆಟ್ಟಿ ಐಕಳಭಾವ, ಹಿರಿಯ ಯಕ್ಷಗುರು ಶಿವರಾಮ ಪಣಂಬೂರು, ಕೊಟ್ಟಾರದ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಡಾ. ವಿಜಯ ಕುಮಾರ್, ಉಪನ್ಯಾಸಕ ಹಾಗೂ ಕಟೀಲು ಮೇಳದ ಕಲಾವಿದೆ ಡಾ. ಶ್ರುತಕೀರ್ತಿರಾಜ ಉಜಿರೆ, ಛಾಂದನ, ಕಟೀಲು ಮೇಳದ ಭಾಗವತ ಅಂಡಾಲ ದೇವಿಪ್ರಸಾದ ಶೆಟ್ಟಿ, ಭಾಗವತ ದಯಾನಂದ ಕೋಡಿಕಲ್, ಯಕ್ಷ ಸುಧಾಂಶು ಕುಲಶೇಖರ ನಿರ್ದೇಶಕ ಸುಧಾಕರ ಸಾಲ್ಯಾನ್ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಕುಮಾರ್ ಮರಕಡ ಸ್ವಾಗತಿಸಿ, ವಂದಿಸಿದರು.
