Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಖ್ಯಾತ ರಂಗಭೂಮಿ ತಜ್ಞ ಉತ್ತಮ ಸಂಘಟಕ ಮಂಡ್ಯ ರಮೇಶ್

    July 14, 2026

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರ ‘ಜಗದ್ಗುರು’ ತಾಳ ಲೋಕಾರ್ಪಣೆ

    July 14, 2026

    ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

    July 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವ | ನವೆಂಬರ್ 18ರಂದು
    Yakshagana

    ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವ | ನವೆಂಬರ್ 18ರಂದು

    November 7, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮರಕಡದ ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವ ದಿನಾಂಕ 18-11-2023ರಂದು ಸಂಜೆ 5 ಗಂಟೆಗೆ ಮರಕಡ ಮೈದಾನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮರಕಡ ಕುಮೇರು ಮನೆ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಅವರ ಸ್ಮರಣಾರ್ಥ ‘ಶುಭವರ್ಣ ಪ್ರಶಸ್ತಿ’ ಪ್ರದಾನ, ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಮಂಗಳಾ ದೇವಿಯ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮೇಲ್ವಿಚಾರಕ ಸ್ವಾಮಿ ರಘು ರಾಮಾನಂದ ಆಶೀವರ್ಚನ ನೀಡುವರು. ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಯಕ್ಷಗಾನ ಹಿರಿಯ ಗುರು ಶಿವರಾಮ ಪಣಂಬೂರು, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ವಿವಿಧ ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

    ಶ್ರೀ ವಿಠಲ ಶೆಟ್ಟಿಗಾರ್

    ಶ್ರೀ ಅಶೋಕ ಆಚಾರ್ಯ

    ಮರಕಡ ಕುಮೇರು ಮನೆ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮರಣಾರ್ಥ ರೂ.10,000/- ಮೊತ್ತ ಒಳಗೊಂಡ ‘ಶುಭವರ್ಣ ಪ್ರಶಸ್ತಿ 2023’ನ್ನು ಹಿರಿಯ ಕಲಾವಿದ ಶ್ರೀ ವಿಠಲ ಶೆಟ್ಟಿಗಾರ್ ಕಾವೂರು ಅವರಿಗೆ, ರೂ.10,000/- ಮೊತ್ತ ಒಳಗೊಂಡ ‘ಶುಭವರ್ಣ ಸನ್ಮಾನ-2023’ನ್ನು ಕಟೀಲು ಮೇಳದ ವೇಣೂರು ಶ್ರೀ ಅಶೋಕ ಆಚಾರ್ಯ ಅವರಿಗೆ ಮತ್ತು ಮರಕಡ ಕಾರ್ತಿಕ್ ಕುಮಾರ್ ಸ್ಮರಣಾರ್ಥ ರೂ.5,000/-ಮೊತ್ತ ಒಳಗೊಂಡ ‘ಶುಭವರ್ಣ ಪ್ರತಿಭಾ ಪುರಸ್ಕಾರ-2023’ನ್ನು ಕಟೀಲು ಮೇಳದ ಕಲಾವಿದ ಶ್ರೀ ದೇವಿಪ್ರಸಾದ್ ಪೆರಾಜೆ ಅವರಿಗೆ ನೀಡಲಾಗುವುದು.

    ಕಾರ್ಯಕ್ರಮದ ಭಾಗವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಲಕ್ಷ್ಮಣ ಕುಮಾ‌ರ್ ಮರಕಡ ನಿರ್ದೇಶನದಲ್ಲಿ ಪೂರ್ವ ರಂಗ, ನಂತರ ‘ಯಜ್ಞಶೇಷೋ ವೈ ರುದ್ರಃ’ ಎಂಬ ಶೀರ್ಷಿಕೆಯಡಿ ಪುರಾಣ ಪ್ರಸಂಗ ಮತ್ತು ಜಿಲ್ಲೆಯ ಮಹಿಳಾ ಕಲಾವಿದೆಯರಿಂದ ‘ಧೀರ ವೀರೋದ್ಧಾರ’ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleತುಳುಕೂಟ(ರಿ) ಬೆದ್ರ ಇದರ ತಿಂಗಳ ಕಾರ್ಯಕ್ರಮ ‘ತುಳುನಾಡಿನ ಭೂತಾರಾಧನೆ’
    Next Article ಸಿದ್ಧಕಟ್ಟೆ ಯಕ್ಷಮಿತ್ರರು ತಂಡದ ವಾರ್ಷಿಕೋತ್ಸವದಲ್ಲಿ ‘ಯಕ್ಷಮಿತ್ರ ಪ್ರಶಸ್ತಿ’ ಪ್ರದಾನ
    roovari

    Add Comment Cancel Reply


    Related Posts

    ಯಕ್ಷಗಾನ ಕಲಾರಂಗದ 51ನೇ ವಾರ್ಷಿಕ ಮಹಾಸಭೆ

    July 14, 2026

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ವಿಶೇಷ ಚಿಂತನ ಮಂಥನ ಕಾರ್ಯಕ್ರಮ

    July 13, 2026

    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ

    July 13, 2026

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಲೆ

    July 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.