ಭಟ್ಕಳ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಖಾರ್ವಿ ಸಮಾಜ ಮತ್ತು ಕೊಂಕಣಿ ಖಾರ್ವಿ ಕಲಾಮಾಂಡ್ ಭಟ್ಕಳ ಇವರ ಸಹಯೋಗದಲ್ಲಿ ದಿನಾಂಕ 28 ಫೆಬ್ರವರಿ 2026ರ ಶನಿವಾರದಂದು ಭಟ್ಕಳ ಬಂದರಿನಲ್ಲಿ ಸಂಜೆ 5-00 ಘಂಟೆಗೆ ‘ಸಿಗ್ಮೆ ಪೊರಬ್ -2026’ ಎಂಬ ಜಾನಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾನ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ವಹಿಸಲಿರುವರು. ಜೊತೆಗೆ ಗೌರವ ಅತಿಥಿಗಳಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀಯುತ ರೊಯ್ ಕ್ಯಾಸ್ತೆಲಿನೊ, ಖಾರ್ವಿ ಸಮಾಜದ ಮುಖಂಡರಾದ ಶ್ರೀಯುತ ಸುಬ್ರಾಯ ಬಿ. ಖಾರ್ವಿ, ಶ್ರೀಯುತ ರವಿ ಟಿ. ನಾಯಕ್, ಶ್ರೀಯುತ ರತ್ನಾಕರ ಎಮ್. ಖಾರ್ವಿ, ಶ್ರೀಯುತ ಶ್ರೀಧರ ಎಮ್. ಖಾರ್ವಿ, ನವಾಯತಿ ಸಮಾಜದ ಮುಖಂಡರಾದ ಶ್ರೀಯುತ ಇನಾಯಿತುಲ್ಲ ಶಾಬಾಂದ್ರಿ ಹಾಗೂ ಇನ್ನಿತರರು ಭಾಗವಹಿಸಲಿರುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
