ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2026ರ ವಿನೂತನ ಕಾರ್ಯಕ್ರಮ ಸರಣಿಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಹೆಚ್. ಶಂಕರ ನಾಗಪ್ಪ ಬಿಲ್ಲವ ಹೆಮ್ಮಾಡಿ ಇವರಿಂದ ಯಕ್ಷಗಾನ, ಜಾನಪದ ಹಾಗೂ ಸಂಗೀತ ಏಕವ್ಯಕ್ತಿ ಪ್ರದರ್ಶನವನ್ನು ದಿನಾಂಕ 21 ಜೂನ್ 2026ರಂದು ಸಂಜೆ 4-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸತತ ಹತ್ತನೇ ವರ್ಷದಲ್ಲಿ 120ನೇ ಕಾರ್ಯಕ್ರಮ ಇದಾಗಿದ್ದು, ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಚಂದನ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

