ಕೂಡ್ಲಿಗಿ : ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾವೇರಿ ಜಿಲ್ಲೆ ಮತ್ತು ಜ್ಞಾನಭಾರತಿ ಶಿಕ್ಷಣ ಮಹಾ ವಿದ್ಯಾಲಯ ಕೂಡ್ಲಿಗಿ ಇವರ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2026ರಂದು ಅಪರಾಹ್ನ 2-00 ಗಂಟೆಗೆ ಕೂಡ್ಲಿಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕರಾದ ಡಾ. ಮಲ್ಲಿಕಾರ್ಜುನ್ ಬಿ. ಮಾನ್ಪಡೆ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕೂಡ್ಲಿಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯ ಅಧ್ಯಕ್ಷರಾದ ಡಾ. ರವಿಕುಮಾರ ಕೆ.ಎಂ. ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ‘ಪಿ ಲಂಕೇಶರ ಬರಹಗಳಲ್ಲಿ ವೈಚಾರಿಕ ನೆಲೆಗಳು’ ಎಂಬ ವಿಷಯದ ಬಗ್ಗೆ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯd ಸಹಾಯಕ ಸಂಶೋಧನಾ ಅಧಿಕಾರಿ ಡಾ. ನಾಯಕರ ಹುಲುಗಪ್ಪ ಹಾಗೂ ‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳು’ ಎಂಬ ವಿಷಯದ ಬಗ್ಗೆ ವಿಜಯನಗರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶಿವಾನಂದ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕೂಡ್ಲಿಗಿ ವೈ.ಎಸ್.ಎಸ್. ಸಮೂಹ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಸೌಮ್ಯಶ್ರೀ ಪಿ.ಕೆ.ಎಂ. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೂಡ್ಲಿಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿಜಯಕುಮಾರ್ ಹೆಚ್.ಎಂ., ವಿಜಯನಗರ ಜಿಲ್ಲೆ ಚಕೋರಿ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕರಾದ ವೆಂಕಟೇಶ್ ಬಡಿಗೇರ್ ಮತ್ತು ಗೆದ್ದಲಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಹಿತಿಗಳು ಹಾಗೂ ಶಿಕ್ಷಕರಾದ ಶೇಖರಯ್ಯ ಟಿ.ಹೆಚ್.ಎಂ. ಇವರ ಗೌರವ ಉಪಸ್ಥಿತಿ ಇರಲಿದೆ. ಎಲ್ಲಾ ಸಾಹಿತ್ಯ ಬಂಧುಗಳು ಲೇಖಕರು ಕವಿ ಮನಸ್ಸುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿ.

