ಮಂಗಳೂರು : ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿ, ಸಂಗೀತ ಶಾರದಾ ಶೃಂಗೇರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ. ಮತ್ತು ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ‘ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಉತ್ಸವ’ ದಿನಾಂಕ 02 ಮೇ 2026ರಂದು ಸಂಜೆ ಗಂಟೆ 4-15ಕ್ಕೆ ಮಂಗಳೂರಿನ ಕರಂಗಲ್ಪಾಡಿ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇವರ ಉಪಾಧ್ಯಕ್ಷರಾದ ಮಹೇಶ್ ಕಜೆ ಇವರು ಈ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಲಿದ್ದು, ರಾಜೇಶ್ ಜಿ., ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್, ಎಂ.ಎಸ್. ಗುರುರಾಜ್ ಮತ್ತು ಶ್ರೀಮತಿ ಪ್ರತಿಮಾ ಶ್ರೀಧರ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ‘ಶಂಕರಸ್ತೋತ್ರ ರತ್ನ ಸಮರ್ಪಣಮ್’ ಕಾರ್ಯಕ್ರಮದಲ್ಲಿ ವಿದುಷಿ ವಂದನಾ ರಾಣಿ ಬೆಂಗಳೂರು, ವಿದುಷಿ ಮಧುರ ಕಾರಂತ್ ಮಂಗಳೂರು ಮತ್ತು ವಿದುಷಿ ರಮ್ಯ ಮಂಗಳಲಕ್ಷ್ಮಿ ಚೆನ್ನೈ ಇವರ ಹಾಡುಗಾರಿಕೆಗೆ ವಿದ್ವಾನ್ ಮನೋಹರ ರಾವ್ ಮಂಗಳೂರು ಮೃದಂಗದಲ್ಲಿ ಮತ್ತು ವಿದುಷಿ ಧನಶ್ರೀ ಶಬರಾಯ ಮಂಗಳೂರು ಇವರು ವಯೋಲಿನ್ ನಲ್ಲಿ ಸಾಥ್ ನೀಡಲಿದ್ದಾರೆ.

