Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸವಣೂರು ಮುಗೇರಿನಲ್ಲಿ ‘ಶ್ರೀ ಹರಿ ದರ್ಶನ’ ತಾಳಮದ್ದಳೆ ಅಭಿಯಾನ
    Yakshagana

    ಸವಣೂರು ಮುಗೇರಿನಲ್ಲಿ ‘ಶ್ರೀ ಹರಿ ದರ್ಶನ’ ತಾಳಮದ್ದಳೆ ಅಭಿಯಾನ

    May 26, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸವಣೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಹಾಗೂ ಶ್ರಾವಣ ರಂಗ ಪ್ರತಿಷ್ಠಾನ ಸವಣೂರು ಇವುಗಳ ಸಂಯೋಜನೆಯಲ್ಲಿ ನಡೆಯುವ ಪವಿತ್ರ ಅಧಿಕ ಮಾಸದಲ್ಲಿ ‘ಶ್ರೀ ಹರಿ ದರ್ಶನ’ ತಾಳಮದ್ದಳೆ ಅಭಿಯಾನವು ದಿನಾಂಕ 24 ಮೇ 2026ರಂದು ಸವಣೂರು ಮುಗೇರು ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ‘ಶರಸೇತು ಬಂಧ’ ಎಂಬ ತಾಳಮದ್ದಳೆ ಕೂಟದ ಮೂಲಕ ಶುಭಾರಂಭಗೊಂಡಿತು.

    ಕೂಟದ ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಚೆಂಡೆ ಮದ್ದಳೆಗಳಲ್ಲಿ ತಾರಾನಾಥ ಸವಣೂರು, ಅನೀಶ್ ಕೃಷ್ಣ ಮತ್ತು ಚಕ್ರ ತಾಳದಲ್ಲಿ ಪುಟ್ಟಣ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಹನೂಮಂತ), ಗುಂಡ್ಯಡ್ಕ ಈಶ್ವರ ಭಟ್ (ವೃದ್ಧ ವಿಪ್ರ), ಗುಡ್ಡಪ್ಪ ಬಲ್ಯ (ಅರ್ಜುನ), ತಾರಾನಾಥ ಸವಣೂರು (ಶ್ರೀ ರಾಮ) ಸಹಕರಿಸಿದರು. ಶ್ರೀ ದೇವಳದ ಅರ್ಚಕ ಪದ್ಮನಾಭ ಕುಂಜತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು. ತಾಳಮದ್ದಳೆ ಕೂಟಕ್ಕೆ ಅವಕಾಶವನ್ನಿತ್ತ ಶ್ರೀ ದೇವಳದ ಆಡಳಿತ ಸಮಿತಿ ಕಾರ್ಯದರ್ಶಿ ಶಿವರಾಮ ಶೆಟ್ಟಿ ಕಿನಾರ ಹಾಗೂ ಟ್ರಸ್ಟಿ ಶಿವರಾಮ ಗೌಡ ಇವರನ್ನು ಉಭಯ ಸಂಘಗಳ ಪರವಾಗಿ ಕೃಷ್ಣ ಭಟ್ ಕುಕ್ಕುಜೆ ಸನ್ಮಾನಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ಸಂಯೋಜಿಸಿದರು. ಸವಣೂರು ಯುವಕ ಮಂಡಲದ ಗಿರಿಶಂಕರ ಸುಲಾಯ, ಶ್ರೀಧರ ಸುಣ್ಣಾಜೆ ಮತ್ತಿತರರು ಸಹಕರಿಸಿದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleರಂಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾವುಕ ವಾತಾವರಣ ಸೃಷ್ಟಿಸಿದ ‘ಅರಿವಿನ ಕಥನ’
    Next Article ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ಉದ್ಘಾಟನೆಗೊಂಡ ‘ಸರಯೂ ಅಷ್ಠಾಹ’
    roovari

    Add Comment Cancel Reply


    Related Posts

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    ನಾಟಕ ವಿಮರ್ಶೆ | ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ರಂಗಸೌಂದರ್ಯದ ಅಪೂರ್ವ ಸಂಗಮ

    June 12, 2026

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.