ವೀರಮಂಗಲ : ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಸಹಯೋಗದಲ್ಲಿ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅಧಿಕಮಾಸದ ಪ್ರಯುಕ್ತ ಯಕ್ಷ ಪುರುಷೋತ್ತಮ ಸರಣಿಯ ಮೂರನೇ ಕಾರ್ಯಕ್ರಮವಾಗಿ ‘ಶ್ರೀ ಕೃಷ್ಣ ಪಾರಿಜಾತ’ ತಾಳಮದ್ದಳೆ ದಿನಾಂಕ 26 ಮೇ 2026ರಂದು ಜರಗಿತು.
ಭಾಗವತರಾಗಿ ಸತೀಶ್ ಇರ್ದೆ, ಆನಂದ ಸವಣೂರು, ಹಿಮ್ಮೇಳದಲ್ಲಿ ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ, ತಾರಾನಾಥ ಸವಣೂರು ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ದೇವೇಂದ್ರ), ಗುಡ್ಡಪ್ಪ ಬಲ್ಯ (ನರಕಾಸುರ), ಈಶ್ವರ ಭಟ್ ಗುಂಡ್ಯಡ್ಕ ಮತ್ತು ಭಾಸ್ಕರ ಬಾರ್ಯ (ಶ್ರೀ ಕೃಷ್ಣ), ತಾರಾನಾಥ ಸವಣೂರು (ಸತ್ಯಭಾಮೆ) ಭಾಗವಹಿಸಿದ್ದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಾವ ಶಿವರಾಮ್ ಭಟ್, ಮುಖ್ಯ ಅರ್ಚಕರಾದ ಪಿ. ರಾಧಾಕೃಷ್ಣ ಶಗ್ರಿತ್ತಾಯ, ವಿಶ್ವಸ್ಥ ಸಮಿತಿಯ ಉಮೇಶ ಕೋಡಿಬೈಲು, ವಿದ್ವಾನ್ ಗೋಪಾಲಕೃಷ್ಣ ಗೌಡ ವೀರಮಂಗಲ, ಹರ್ಷ ಗುತ್ತು ಮೊದಲಾದವರು ಉಪಸ್ಥಿತರಿದ್ದು ಕಲಾವಿದರನ್ನು ಗೌರವಿಸಿದರು. ಶ್ರವಣರಂಗ ಪ್ರತಿಷ್ಠಾನದ ಸಂಚಾಲಕ ತಾರಾನಾಥ ಸವಣೂರು ಸ್ವಾಗತಿಸಿ, ಶ್ರೀ ಆಂಜನೇಯ ಯಕ್ಷಗಾನ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ವಂದಿಸಿದರು.
