Subscribe to Updates

    Get the latest creative news from FooBar about art, design and business.

    What's Hot

    ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜನವರಿ 31

    January 20, 2026

    ಉಡುಪಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಂಸ್ಕೃತಿ ಉತ್ಸವ -2026’ | ಜನವರಿ 24, 25 ಮತ್ತು 26

    January 20, 2026

    ಶ್ರೋತೃವರ್ಗವನ್ನು ಮಂತ್ರಮುಗ್ಧರನ್ನಾಗಿಸಿದ ‘ಲಯ ಲಾವಣ್ಯ’ ವಿಶೇಷ ಸಂಗೀತ ಸಂಭ್ರಮ

    January 20, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಟೀಲಿನ ಸರಸ್ವತೀ ಸದನದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಸಂಮಾನ
    Yakshagana

    ಕಟೀಲಿನ ಸರಸ್ವತೀ ಸದನದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಸಂಮಾನ

    October 3, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಟೀಲು : ಯಕ್ಷಗಾನ ಆಟ ಕೂಟಗಳ ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಅರವತ್ತು ವರ್ಷ ತುಂಬಿದ ಈ ಸುಸಂದರ್ಭದಲ್ಲಿ ಆಯೋಜಿಸಲಾದ ಸಂಮಾನ ಕಾರ್ಯಕ್ರಮವು ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ ವಿದ್ವಾಂಸ ಉಮಾಕಾಂತ ಭಟ್ “ಪಾತ್ರ ಪ್ರಸಂಗ ನಿರ್ವಹಣೆಯನ್ನು ಆಟ ಕೂಟಗಳಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಪ್ರಸಂಗದ ಜೊತೆಗೆ ಪಾತ್ರವನ್ನು ಮೆರೆಸುವ ಕಲಾವಿದರಲ್ಲಿ ಅದ್ವಿತೀಯರು ಸುಣ್ಣಂಬಳ ವಿಶ್ವೇಶ್ವರ ಭಟ್ಟರು. ಪ್ರತಿಭೆ ಮತ್ತು ಪಾಂಡಿತ್ಯವನ್ನು ಸಮಸಮವಾಗಿ ನಿರ್ವಹಿಸಿದ ಸುಣ್ಣಂಬಳರು ಕೇವಲ ಕಲಾವಿದರಲ್ಲ, ಯಕ್ಷಗಾನ ಕಲೆಯ ವಿಶ್ವ ವಿದ್ಯಾಲಯ ಆಗಿದ್ದಾರೆ.” ಎಂದು ಹೇಳಿದರು.

    ಮಾನವ ಹಕ್ಕು ಆಯೋಗದ ಟಿ. ಶ್ಯಾಮ್ ಭಟ್ ಮಾತನಾಡಿ “ಆಟಕೂಟಗಳ ಮೂಲಕ ಪ್ರಸ್ತುತ ಯಕ್ಷಗಾನದ ನಂಬರ್ ಒನ್ ಕಲಾವಿದ ಎಂದು ಗುರುತಿಸಬಹುದಾದ ಕಲಾವಿದ ಸುಣ್ಣಂಬಳ ನಯವಿನಯತೆಯಿಂದ ಎಲ್ಲರನ್ನೂ ಗೌರವಿಸಿ ಬೆಳೆಯುತ್ತ ಬಂದವರು. ಇವರು ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುವಲ್ಲಿ ಶ್ರೇಷ್ಠರಾಗಿದ್ದಾರೆ.” ಎಂದರು.

    ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬಿಪಿನ್ ಚಂದ್ರಶೆಟ್ಟಿ, ಪ್ರವೀಣ್ ಭಂಡಾರಿ, ಡಾ. ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ್ ಕಲ್ಕೂರ, ರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

    ಶ್ರೀ ದುರ್ಗಾಮಕ್ಕಳ ಮೇಳದ ಕಲಾವಿದರು ಅರವತ್ತು ಹರಿವಾಣಗಳಲ್ಲಿ ಫಲವಸ್ತುಗಳನ್ನು ಸಮರ್ಪಿಸಿದರು.
    ರವೀಂದ್ರ ಅತ್ತೂರು ಮತ್ತು ಸುದರ್ಶನ ಆಚಾರ್ ಇವರು ಮಂತ್ರೋಕ್ತದ ಮೂಲಕ ಷಷ್ಟಿಪೂರ್ತಿಯ ಸಲುವಾಗಿ ಸುಣ್ಣಂಬಳರನ್ನು ಹಾರೈಸಿದರು. ಅನೇಕ ಅಭಿಮಾನಿಗಳು, ಕಟೀಲು ಮೇಳದ ಕಲಾವಿದರು ಕಿರೀಟ, ಛಾಯಾಚಿತ್ರ, ಹಾರ, ವಸ್ತ್ರ, ಬಂಗಾರದ ಸರ,ಇತ್ಯಾದಿಗಳ ಮೂಲಕ ಸುಣ್ಣಂಬಳ ದಂಪತಿಗಳನ್ನು ಗೌರವಿಸಿದರು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ “ಕಲ್ಲಾಡಿ ವಿಠಲ ಶೆಟ್ಟರಿಂದ ಆದಿಯಾಗಿ ಧರ್ಮಸ್ಥಳ ಕೇಂದ್ರದಲ್ಲಿ ಸಿಕ್ಕ ಗುರುಗಳು, ಕಟೀಲು ಮೇಳದಲ್ಲಿ ಬಲಿಪರು, ಹಿರಿಯ ಕಲಾವಿದರು ಹೀಗೆ ಅನೇಕರು ತನ್ನನ್ನು ಬೆಳೆಸಿದ್ದಾರೆ. ತನ್ನನ್ನು ತಾನು ವಿಮರ್ಶಿಸಿಕೊಳ್ಳುವ ಗುಣ ಕಲಾವಿದರಲ್ಲಿ ಬೇಕು. ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಂಡಿದ್ದೇನೆ. ಕಲಾಭಿಮಾನಿಗಳು ಕಟೀಲಿನ ಆಸ್ರಣ್ಣ ಬಂಧುಗಳು. ಸಹಕಲಾವಿದರು ಕೊಟ್ಟ ಪ್ರೀತಿ ದೊಡ್ಡದು. ಕಲಾವಿದನಾದವನಿಗೆ ಕಲಾವಿದರ ಮಧ್ಯೆಯೇ ಸಂಮಾನಿಸುವುದು ಅತ್ಯಂತ ಆನಂದ. ನಿತ್ಯವೇಷದವನಿಂದಲೂ ಕಲಿಯಲು ಇರುತ್ತದೆ. ಯಕ್ಷಗಾನ ಏನು ಕೊಟ್ಟಿದೆ ಎಂದು ಕೇಳಬಹುದು. ಆರೋಗ್ಯಪೂರ್ಣವಾಗಿ ತಿನ್ನುವವನಿಗೆ ಯಕ್ಷಗಾನ ಎಲ್ಲವನ್ನೂ ಕೊಡುತ್ತದೆ.” ಎಂದರು.

    ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ಮಧೂರು ವಾಸುದೇವ ರಂಗಾ ಭಟ್ ನಿರೂಪಿಸಿ, ವಾಸುದೇವ ಶೆಣೈ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌. ಎಸ್. ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮ
    Next Article ಕೆರೆಮನೆ ಯಕ್ಷಗಾನ ಸಂಸ್ಥೆಗೆ ವಿಶ್ವಸಂಸ್ಥೆಯ ಮಾನ್ಯತೆ
    roovari

    Comments are closed.

    Related Posts

    ಭಾಗವತ ಬಲಿಪ ಮತ್ತು ಹಿರಿಯ ವೇಷಧಾರಿ ಕುಲಾಲ್ ಇವರಿಗೆ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ

    January 19, 2026

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ಮಕರ ಸಂಕ್ರಮಣದ ಅಂಗವಾಗಿ ‘ಶಾಂಭವಿ ವಿಲಾಸ’ ತಾಳಮದ್ದಳೆ

    January 16, 2026

    ದಯಾನಂದ ಬಳೆಗಾರ ನಾಗೂರು ಇವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ

    January 16, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.