ಮಂಗಳೂರು : ಕರಾವಳಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ‘ನಾಟ್ಯನಿಕೇತನ’ ಕೊಲ್ಯ ತನ್ನ ನಾಟ್ಯನಿಕೇತನ ಕುಟೀರದಲ್ಲಿ ಕರಾವಳಿಯ ಯುವ ಬಹುಮುಖೀ ಕಲಾವಿದರಾದ ವಿದ್ವಾನ್ ಮಂಜುನಾಥ್ ಪುತ್ತೂರು ಇವರಿಂದ ‘ತಾಳ ಪ್ರಕ್ರಿಯೆ’ ಕಾರ್ಯಾಗಾರವನ್ನು ದಿನಾಂಕ 02 ಮೇ 2026ರಂದು ಆಯೋಜಿಸಿದೆ ಎಂದು ಹಿರಿಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ತಿಳಿಸಿದ್ದಾರೆ.
ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ದಿನಾಂಕ 29 ಏಪ್ರಿಲ್ 2026ರ ಒಳಗೆ (WhatsApp) ವಾಟ್ಸಪ್ ಸಂದೇಶ ಕಳುಹಿಸಿ ನೋಂದಾವಣೆ ಮಾಡುವರೇ ವಿನಂತಿ:
* ವಸಿಷ್ಠ ಎಸ್. ರಾವ್: 9845034059
* ಅನ್ವಿಕಾ ಚಂದ್ರಶೇಖರ್: 9886366579

