ಕಾಸರಗೋಡು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ರಾಮ ನವಮಿ ಉತ್ಸವದ ಅಂಗವಾಗಿ ತಾಳಮದ್ದಳೆ ಕೂಟ ದಿನಾಂಕ 27 ಮಾರ್ಚ್ 2026ರಂದು ಅಪರಾಹ್ನ 3-00 ಗಂಟೆಗೆ ಕಾಸರಗೋಡು ಕೂಡ್ಲು ಗುಡ್ಡೆ ದೇವಸ್ಥಾನ ರಸ್ತೆ ‘ರಾಮಧಾಮ’ ಇಲ್ಲಿ ನಡೆಯಲಿದೆ.
ಶ್ರೀ ಭಾಸ್ಕರ ಬಾರ್ಯ ಇವರ ನಿರ್ದೇಶನದಲ್ಲಿ ‘ಶ್ರೀ ರಾಮ ವನಗಮನ’ ಎಂಬ ಆಖ್ಯಾನದೊಂದಿಗೆ ನಡೆಯುವ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರು ನಾರಾಯಣ ಶರ್ಮ ಕಾಟುಕುಕ್ಕೆ, ಚೆಂಡೆ ಮತ್ತು ಮದ್ದಳೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಮತ್ತು ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ, ಗಾಯತ್ರಿ ಹೆಬ್ಬಾರ್, ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಹರಿಣಾಕ್ಷಿ ಜೆ. ಶೆಟ್ಟಿ ಇವರುಗಳು ಸಹಕರಿಸಲಿದ್ದಾರೆ.

