ಬೆಳ್ಳೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಶ್ರೀ ಕಾವೇಶ್ವರ ದೇವಸ್ಥಾನ ಬೆಳ್ಳೂರು ಇದರ ವಾರ್ಷಿಕ ಜಾತ್ರೆಯ ಅಂಗವಾಗಿ ತಾಳಮದ್ದಳೆ ಕೂಟ ‘ದಕ್ಷ ಯಜ್ಞ’ ಎಂಬ ಆಖ್ಯಾನದೊಂದಿಗೆ ದಿನಾಂಕ 04 ಮಾರ್ಚ್ 2026ರಂದು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೇಯಾ ರೋಹಿತ್ ಉಚ್ಚಿಲ್, ಚೆಂಡೆ ಮದ್ದಳೆಗಳಲ್ಲಿ ರೋಹಿತ್ ಉಚ್ಚಿಲ್, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ), ಹರಿಣಾಕ್ಷಿ ಜೆ. ಶೆಟ್ಟಿ (ದಕ್ಷ), ಶಾರದಾ ಅರಸ್ (ವೃದ್ಧ ಬ್ರಾಹ್ಮಣ), ಭಾರತಿ ರೈ ಅರಿಯಡ್ಕ (ವೀರಭದ್ರ) ಸಹಕರಿಸಿದರು. ಶ್ರೀಮತಿ ಮತ್ತು ಶ್ರೀ ಕುಶ ಕುಮಾರ್ ಸಾನಕಟ್ಟ ಪ್ರಾಯೋಜಿಸಿದರು. ಸಂಘದ ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಕಿಶೋರ್ ಭಂಡಾರಿ ವಂದಿಸಿದರು. ಶ್ರೀ ದೇವಳದ ಆಡಳಿತ ಸಮಿತಿ ಅಧ್ಯಕ್ಷ ರಘು ಶೆಟ್ಟಿ ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.
