ಬೆಳಗಾವಿ : ರಂಗಸಂಪದ (ರಿ.) ಬೆಳಗಾವಿ ಇವರ ಆಶ್ರಯದಲ್ಲಿ ‘ರಂಗಾಭಿನಯ ಕಾರ್ಯಾಗಾರ’ ದಿನಾಂಕ 25 ಮತ್ತು 26 ಏಪ್ರಿಲ್ 2026ರಂದು ಬೆಳಿಗ್ಗೆ 10-30 ಗಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
18 ವರ್ಷದ ಮೇಲ್ಪಟ್ಟು ಎಲ್ಲಾ ರಂಗಾಸಕ್ತರಿಗೆ ಪ್ರವೇಶವಿದ್ದು, ಧಾರವಾಡದ ಖ್ಯಾತ ರಂಗ ನಿರ್ದೇಶಕರಾದ ಡಾ. ಪ್ರಕಾಶ ಗರೂಡ ಮತ್ತು ಶ್ರೀಮತಿ ರಜನಿ ಗರೂಡ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಹೆಸರು ನೋಂದಾಯಿಸಲು ದಿನಾಂಕ 15 ಏಪ್ರಿಲ್ 2026 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 98450 25638 ಸಂಖ್ಯೆಯನ್ನು ಸಂಪರ್ಕಿಸಿರಿ.

