ಬೆಳಗಾವಿ : 1978ರಲ್ಲಿ ಹುಟ್ಟಿ ಸತತವಾಗಿ ಕಳೆದ 47 ವರ್ಷಗಳಿಂದ ಬೆಳಗಾವಿ ಮತ್ತು ಕರ್ನಾಟಕದಾದ್ಯಂತ ರಂಗಚಟುವಟಿಕೆಗಳಿಂದ ಹೆಸರು ಗಳಿಸಿದ ರಂಗಸಂಪದ ಬೆಳಗಾವಿಯ ತಂಡ ಮತ್ತೊಮ್ಮೆ ಈ ವರ್ಷ ಎರಡು ದಿನಗಳ ರಂಗ ಕಾರ್ಯಾಗಾರ ಹಮ್ಮಿಕೊಂಡಿದೆ. ಧಾರವಾಡದ ಖ್ಯಾತ ನಟ, ನಿರ್ದೇಶಕ, ರಂಗ ತರಬೇತುದಾರ ದಂಪತಿಗಳಾದ ರಜನಿ ಗರುಡ ಮತ್ತು ಡಾ. ಪ್ರಕಾಶ ಗರುಡ ಇವರ ನಿರ್ದೇಶನದಲ್ಲಿ ದಿನಾಂಕ 25 ಮತ್ತು 26 ಏಪ್ರಿಲ್ 2026ರಂದು ಎರಡು ದಿನಗಳ ರಂಗ ಕಾರ್ಯಾಗಾರವನ್ನು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದೇವೆ.
1) ಮೊದಲ 25 ಆಸಕ್ತರಿಗೆ ಮಾತ್ರ ಅವಕಾಶ.
2) ಬೆಳಿಗ್ಗೆ ಸಂಜೆಯ ಚಹಾ ಮತ್ತು ಮಧ್ಯಾಹ್ನದ ಭೋಜನ ಪೂರೈಸಲಾಗುವದು.
3) ಎರಡೂ ದಿನ ಬೆಳಿಗ್ಗೆಯ 10-30ರಿಂದ ಸಂಜೆ 6-30ರವರೆಗೆ ಕಾರ್ಯಾಗಾರದಲ್ಲಿ ಉಪಸ್ಥಿತಿ ಕಡ್ಡಾಯ.
4) ಕಾರ್ಯಾಗಾರದ ಕೊನೆಯಲ್ಲಿ ಪ್ರಶಸ್ತಿ ಪತ್ರ ನೀಡಲಾಗುವದು.
5) ಪ್ರವೇಶ ಸಹಾಯ ಧನ ರೂ.1,000/- ಒಬ್ಬರಿಗೆ.
6) ಕಾರ್ಯಾಗಾರದಲ್ಲಿ ಭಾಗವಹಿಸಿದ ಕಲಾವಿದರಿಗೆ ರಂಗಸಂಪದ ತಂಡದ ಮುಂದಿನ ನಾಟಕಗಳಲ್ಲಿ ನಟಿಸುವ ಅವಕಾಶ.
ಆಸಕ್ತರು ದಿನಾಂಕ 15 ಏಪ್ರಿಲ್ 2026ರ ಮೊದಲು ರೂ.1,000/-ವನ್ನು ಯು.ಪಿ.ಆಯ್. ಮೂಲಕ 9845025638 ನಂಬರಗೆ ಕಳಿಸಿ, ಡಾ. ಅರವಿಂದ ಕುಲಕರ್ಣಿಯ ಅಧ್ಯಕ್ಷರು ರಂಗಸಂಪದ ಬೆಳಗಾವಿ ಇವರ ಹತ್ತಿರ ಹೆಸರು ನೋಂದಾಯಿಸಿಕೊಳ್ಳಿ. ಹೆಚ್ಚಿನ ವಿವರಗಳಿಗಾಗಿ 9845025638 ನಂಬರಗೆ ಕರೆ ಮಾಡಿ.
