Subscribe to Updates

    Get the latest creative news from FooBar about art, design and business.

    What's Hot

    ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜನವರಿ 31

    January 20, 2026

    ಉಡುಪಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಂಸ್ಕೃತಿ ಉತ್ಸವ -2026’ | ಜನವರಿ 24, 25 ಮತ್ತು 26

    January 20, 2026

    ಶ್ರೋತೃವರ್ಗವನ್ನು ಮಂತ್ರಮುಗ್ಧರನ್ನಾಗಿಸಿದ ‘ಲಯ ಲಾವಣ್ಯ’ ವಿಶೇಷ ಸಂಗೀತ ಸಂಭ್ರಮ

    January 20, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಮೂರು ಮಂದಿ ವಿದ್ಯಾರ್ಥಿಗಳು ಶಿಷ್ಯ ವೇತನಕ್ಕೆ ಆಯ್ಕೆ
    Bharathanatya

    ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಮೂರು ಮಂದಿ ವಿದ್ಯಾರ್ಥಿಗಳು ಶಿಷ್ಯ ವೇತನಕ್ಕೆ ಆಯ್ಕೆ

    December 21, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ 2023-24 ಮತ್ತು 2024-25ನೇ ಸಾಲಿನ ಶಿಷ್ಯ ವೇತನಕ್ಕೆ ನೃತ್ಯದ ಭರತನಾಟ್ಯ ವಿಭಾಗದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಮೂರು ಮಂದಿ ವಿದ್ಯಾರ್ಥಿಗಳಾದ ತನುವಿ, ಸಿಂಚನಾ ಭಟ್ ಹಾಗೂ ತೇಜಸ್ವಿರಾಜ್ ಆಯ್ಕೆಯಾಗಿದ್ದಾರೆ.ಇವರುಗಳು ನೃತ್ಯ ಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಇವರಲ್ಲಿ ನೃತ್ಯಾಭ್ಯಾಸ ನಡೆಸುತ್ತಿದ್ದಾರೆ.

    ತನುವಿ ಇವರು ಉಪ್ಪಿನಂಗಡಿ ನಿವಾಸಿಯಾಗಿದ್ದು, ಶ್ರೀಮತಿ ಮತ್ತು ಶ್ರೀ ಯೋಗಾನಂದ ಮತ್ತು ಸುನೀತಾ ದಂಪತಿಯ ಪುತ್ರಿಯಾಗಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷ ಬಿ. ಸಿ. ಎ. ವ್ಯಾಸಂಗ ಮಾಡುತ್ತಿದ್ದು, ಕಳೆದ 15 ವರ್ಷಗಳಿಂದ ಈ ಕೇಂದ್ರದಲ್ಲಿ ನೃತ್ಯ ಕಲಿಯುತ್ತಿದ್ದಾರೆ. ಭಾರತನಾಟ್ಯದಲ್ಲಿ ಸೀನಿಯರ್ ಆಗಿ ಈಗ ವಿದ್ವತ್ ಪೂರ್ವ ಪರೀಕ್ಷೆ ಬರೆದಿದ್ದಾರೆ.

    ಸಿಂಚನಾ ಎಸ್. ಭಟ್ ಮಾಣಿಯ ನೇರಳಕಟ್ಟೆ ನಿವಾಸಿಯಾಗಿದ್ದು, ಶ್ರೀಮತಿ ಮತ್ತು ಶ್ರೀ ಶಂಕರನಾರಾಯಣ ಭಟ್ ಮತ್ತು ಪಾವನಾ ಎಸ್. ಭಟ್ ದಂಪತಿಯ ಪುತ್ರಿಯಾಗಿದ್ದಾರೆ. ಮಂಗಳೂರಿನ ವಳಚ್ಚಿಲ್ ಇಲ್ಲಿನ ಶ್ರೀನಿವಾಸ ಫಾರ್ಮಸಿ ವಿದ್ಯಾಲಯದಲ್ಲಿ ಪ್ರಥಮ ಸ್ನಾತಕೋತ್ತರ ಫಾರ್ಮಾ ಕಲಿಯುತ್ತಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಪದವಿ ಪಡೆದಿರುವ ಇವರು ಈ ಕಲಾಕೇಂದ್ರದಲ್ಲಿ ಸುಮಾರು 10 ವರ್ಷಗಳಿಂದ ನೃತ್ಯ ಕಲಿಯುತ್ತಿದ್ದಾರೆ.

    ದಿ.ಶಾಂತರಾಮ ಗೌಡ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಯ ಪುತ್ರರಾಗಿರುವ ತೇಜಸ್‌ರಾಜ್ ಇವರು ಕಡಬದ ನಿವಾಸಿಯಾಗಿದ್ದಾರೆ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಬಳಿಕ ಈಗ ಚಾರ್ಟೆಡ್ ಎಕೌಂಟ್ಸ್ ನಲ್ಲಿ ಇಂಟರ್ ಮೀಡಿಯೇಟ್ ಉತ್ತೀರ್ಣರಾಗಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಈ ಕಲಾ ಕೇಂದ್ರದ ನೃತ್ಯ ವಿದ್ಯಾರ್ಥಿಯಾಗಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯಡಕದಲ್ಲಿ ‘ಕಿಶೋರ ಯಕ್ಷಗಾನ ಸಂಭ್ರಮ’ದ ಸಮಾರೋಪ ಸಮಾರಂಭ
    Next Article ‘ಯಕ್ಷ ಮಂಜುಳಾ ಕದ್ರಿ’ ಬಳಗದಿಂದ ಲೀಲಾವತಿ ಬೈಪಡಿತ್ತಾಯರಿಗೆ ನುಡಿನಮನ
    roovari

    Add Comment Cancel Reply


    Related Posts

    ‘ಸಾಧನ ಸಂಗಮ’ದ ‘ಬಹುಳ’ ನೃತ್ಯೋತ್ಸವ 2026 | ಜನವರಿ 26

    January 20, 2026

    ಕಲಾರಾಧಕರನ್ನು ಮಂತ್ರಮುಗ್ಧರನ್ನಾಗಿಸಿದ ‘ನೃತ್ಯೋತ್ಕ್ರಮಣ’ ಭರತನಾಟ್ಯ ಕಾರ್ಯಕ್ರಮ

    January 19, 2026

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ನೃತ್ಯ ವಿಮರ್ಶೆ | ಕೀರ್ತನಾಳ ಮನಸೆಳೆದ ನೃತ್ಯಾವಳಿ

    January 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.