ಮಂಗಳೂರು: ಶ್ರೀ ಕ್ಷೇತ್ರ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು ಇದರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಂಗಳೂರಿನ ‘ಥಂಡರ್ ಕಿಡ್ಸ್’ ತಂಡದ ಮಕ್ಕಳು ವಾದ್ಯಗೋಷ್ಠಿ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 14-05-2023ರಂದು ನಡೆಸಿಕೊಟ್ಟರು. ಮಕ್ಕಳ ಬೆರಳುಗಳಿಂದ ಮೂಡಿದ ಸಂಗೀತದ ಸ್ವರಗಳು ಮತ್ತು ಕಂಠದಿಂದ ಮೂಡಿದ ಸ್ವರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತಾಸಕ್ತ ಮಕ್ಕಳ ಬಾಲ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ದೊರೆತುದು ಮಕ್ಕಳ ಆಸಕ್ತಿಗೆ ಪೂರಕವಾಗಿತ್ತು.
ತಬಲ : ಕು. ಆದ್ಯ ಮತ್ತು ಮಾ. ವಿನ್ಯಾಸ್, ಕೀಬೋರ್ಡ್: ಸ್ವಸ್ತಿಕ್ ಮತ್ತು ಅಕ್ಷಜ್, ಗಿಟಾರ್: ಮನ್ವಿತ್, ಕೊಳಲು : ಸಚಿನ್, ರಿದಂ ಪ್ಯಾಡ್ : ಶಾಹಿಲ್, ವೀಣೆ: ಐಶ್ವರ್ಯ, ಗಾಯನದಲ್ಲಿ: ವಿನಮ್ರ ಇಡಿದು, ಅರ್ಮನ್, ನಿನಾದ, ಪ್ರಾರ್ಥನಾ ಭಟ್, ವಸುಧ ಮಲ್ಯ, ಸುಜ್ಞಾನ ಆಚಾರ್ಯ ಪಾಲ್ಗೊಂಡಿದ್ದರು. ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್ ಅವರು ತರಬೇತಿಯನ್ನು ನೀಡಿದ್ದರು. ಕಾರ್ಯಕ್ರಮವನ್ನು ನಿಹಾರಿಕ ನಿರೂಪಿಸಿದರು. ಸುಧಾಕರರಾವ್ ಪೇಜಾವರ ಅವರು ಉಪಸ್ಥಿತರಿದ್ದು ಸಹಕರಿಸಿದರು.