ಕುಂದಾಪುರ : ಖ್ಯಾತ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಅನುವಾದಿಸಿದ ಮಲೆಯಾಳದ ಪ್ರಸಿದ್ಧ ಕಥೆಗಾರ್ತಿ ಚಂದ್ರಮತಿಯವರ ಕಾದಂಬರಿ ‘ಅಪರ್ಣಾಳ ಸೆರೆಮನೆಗಳು-ಅಶ್ವತಿಯದ್ದೂ’ ಅನ್ನುವ ಕಾದಂಬರಿಯನ್ನು ದಿನಾಂಕ 03 ಜೂನ್ 2026ರಂದು ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟ್ರಾಮ ಭಟ್ ಬಿಡುಗಡೆ ಮಾಡಿದರು.
ಪಾರ್ವತಿ ಐತಾಳ್ ಇವರು ಕೃತಿಯ ಬಗ್ಗೆ ಮಾತನಾಡುತ್ತ “ಇದು ಸಂಪ್ರದಾಯ ಮತ್ತು ಆಧುನಿಕತೆಗಳ ನಡುವೆ ಆಯ್ಕೆ ಮಾಡಲರಿಯದೆ ತೊಳಲಾಡುತ್ತಿರುವ ಇಂದಿನ ಯುವಜನತೆಯ ದುಸ್ಥಿತಿಯನ್ನು ಚಿತ್ರಿಸುವ ಕಾದಂಬರಿ. ಆದ್ದರಿಂದ ಇಂದಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾದದ್ದು” ಎಂದು ಹೇಳಿದರು.
ವಿಶ್ವ ಮಲೆಯಾಳ ಮಹಾಮಂಡಲದ ಉಡುಪಿ ಪ್ರಾವಿನ್ಸ್ ವತಿಯಿಂದ ಕಾಲೇಜು ಗ್ರಂಥಾಲಯಕ್ಕೆ ಪುಸ್ತಕ ದಾನ ಸಮಾರಂಭದಲ್ಲಿ WMCಯ ಚೇರ್ಮನ್ ಶಿನೋದ್ ಟಿ.ಆರ್., ಅಧ್ಯಕ್ಷ ಬಿನೇಶ್, ಕಾರ್ಯದರ್ಶಿ ಬಿನಿಲ್ ವಿ. ಮತ್ತು ಕಾಲೇಜಿನ ಗ್ರಂಥಾಲಯ ಸಮಿತಿಯ ಸಂಯೋಜಕ ಪ್ರಸ್ತುತ ವೈ.ಎನ್. ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಜ್ಞಾ ಪ್ರಸ್ತಾವನೆ ಗೈದರು. ವಿದ್ಯಾರ್ಥಿನಿಯರಾದ ಮಾನಸಾ ವಂದನಾರ್ಪಣೆ ಮಾಡಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
