Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಾಂಗಣದಿಂದ ಅಗಲಿದ ಯಕ್ಷಗಾನ ಕಲಾವಿದರಿಗೆ ಸ್ಮರಣಾಂಜಲಿ
    Commemoration

    ಯಕ್ಷಾಂಗಣದಿಂದ ಅಗಲಿದ ಯಕ್ಷಗಾನ ಕಲಾವಿದರಿಗೆ ಸ್ಮರಣಾಂಜಲಿ

    November 29, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಯಕ್ಷಾಂಗಣ ಮಂಗಳೂರು ವತಿಯಿಂದ ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾದ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿ ಹಬ್ಬ ಪ್ರಯುಕ್ತ ಅಗಲಿದ ಕಲಾವಿದರ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 27 ನವೆಂಬರ್ 2025ರಂದು ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿತು.
    ಈ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಹಿರಿಯ ನಾಟಕಕಾರ ಮತ್ತು ಉದ್ಯಮಿ ಡಾ. ಸಂಜೀವ ದಂಡಕೇರಿ “ತಲೆ ತಲಾಂತರದಿಂದ ಸಾಗಿ ಬಂದ ಭಾರತೀಯ ಕಲಾ ಪರಂಪರೆ ಚಿರ ನೂತನವಾದುದು. ಕಲಾವಿದರು ಭೌತಿಕವಾಗಿ ಅಳಿದು ಹೋದರೂ ಅವರು ತಮ್ಮ ಸಾಧನೆಯ ಬಲದಿಂದ ಶಾಶ್ವತವಾಗಿ ಬದುಕಿ ಉಳಿಯುತ್ತಾರೆ. ಯಕ್ಷಗಾನದಲ್ಲಿ ಆಗಿ ಹೋದ ಅದೆಷ್ಟೋ ಮಹಾನ್ ಕಲಾವಿದರ ಮಾತುಗಾರಿಕೆ, ಪಾತ್ರ ಚಿತ್ರಣ ಮತ್ತು ಅಭಿನಯ ಕೌಶಲ್ಯ, ಅದನ್ನು ಕಂಡವರ ಮನಸ್ಸಿನಲ್ಲಿ ಈಗಲೂ ಅಚ್ಚ ಹಸಿರಾಗಿದೆ” ಎಂದು ಹೇಳಿದರು.

    ಯಕ್ಷಕಲಾ ಪೊಳಲಿಯ ಕಲಾ ಸಂಘಟಕ ಜನಾರ್ದನ ಅಮ್ಮುಂಜೆಯವರು ಈ ವರ್ಷ ನಮ್ಮನ್ನಗಲಿದ ಹಿರಿಯ ಯಕ್ಷಗಾನ ಸ್ತ್ರೀಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್, ಅರ್ಥಧಾರಿ ಶಂಭು ಶರ್ಮ ವಿಟ್ಲ ಮತ್ತು ಪ್ರಸಂಗಕರ್ತ, ಛಾಂದಸ ಗಣೇಶ ಕೊಲೆಕಾಡಿ ಇವರ ಕಲಾಸಾಧನೆಯನ್ನು ಸ್ಮರಿಸಿ ನುಡಿ ನಮನ ಅರ್ಪಿಸಿದರು. ಶಾರದಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಡಾ. ಲೀಲಾ ಎಸ್. ಉಪಾಧ್ಯಾಯ, ಕರ್ನಾಟಕ ಬ್ಯಾಂಕಿನ ವಿಶ್ರಾಂತ ಮಹಾಪ್ರಬಂಧಕಿ ಸುಮನಾ ಘಾಟೆ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ಮಾಧವ ಎಂ.ಕೆ. ಮುಖ್ಯ ಅತಿಥಿಗಳಾಗಿದ್ದರು. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥನೆ ಹಾಡಿ, ಸಂಚಾಲಕರಾದ ರವೀಂದ್ರ ರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿ, ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ವಂದಿಸಿದರು.

    ಕದ್ರಿ ಹವ್ಯಾಸಿ ಬಳಗದ ಸಂಚಾಲಕ ಶರತ್ ಕುಮಾರ್ ಕದ್ರಿ ಇವರ ಸಂಯೋಜನೆಯಲ್ಲಿ ಸಪ್ತಾಹದ ಆರನೇ ಆಖ್ಯಾನ ‘ಪಾಂಚಜನ್ಯೋತ್ಪತ್ತಿ’ ತಾಳಮದ್ದಳೆ ನೆರವೇರಿತು. ಶಿವಪ್ರಸಾದ್ ಎಡಪದವು ಇವರ ಭಾಗವತಿಕೆಗೆ, ಸುದಾಸ್ ಆಚಾರ್ಯ ಕಾವೂರು, ರಾಜೇಶ್ ಕುಡುಪಾಡಿ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಹಿಮ್ಮೇಳ ಒದಗಿಸಿದರು. ಸರ್ಪಂಗಳ ಈಶ್ವರ ಭಟ್, ಪುತ್ತೂರು ದೇವರಾಜ ಹೆಗ್ಡೆ, ರವಿ ಅಲೆವೂರಾಯ ವರ್ಕಾಡಿ, ಶಿವಾನಂದ ಪೆರ್ಲಗುರಿ, ಡಾ. ದಿನಕರ ಎಸ್. ಪಚ್ಚನಾಡಿ, ವಿದ್ಯಾಧರ ಶೆಟ್ಟಿ ಪೊಸಕುರಲ್ ಅರ್ಥಧಾರಿಗಳಾಗಿದ್ದರು.

    baikady commemoration roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಾಂಗಣದ ನುಡಿ ಹಬ್ಬದಲ್ಲಿ ಯಕ್ಷಗಾನ ಕಲಾವಿದ ದಿ. ಜಲಂಧರ ರೈ ಸಂಸ್ಮರಣೆ
    Next Article ಮೈಸೂರಿನ ನಟನ ರಂಗಶಾಲೆಯಲ್ಲಿ ‘ಭಾಸ ಪಂಚಕ’ ಹೊಸ ನಾಟಕ ಪ್ರದರ್ಶನ | ನವೆಂಬರ್ 29 ಮತ್ತು 30
    roovari

    Add Comment Cancel Reply


    Related Posts

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.