Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಖ್ಯಾತ ರಂಗಭೂಮಿ ತಜ್ಞ ಉತ್ತಮ ಸಂಘಟಕ ಮಂಡ್ಯ ರಮೇಶ್

    July 14, 2026

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರ ‘ಜಗದ್ಗುರು’ ತಾಳ ಲೋಕಾರ್ಪಣೆ

    July 14, 2026

    ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

    July 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಂಗೀತ ಪರಿಷತ್‌ ಇದರ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ
    Felicitation

    ಸಂಗೀತ ಪರಿಷತ್‌ ಇದರ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ

    March 19, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಸಂಗೀತ ಪರಿಷತ್‌ ಇದರ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ 10-03-2024ರಂದು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಠದ ಅಧ್ಯಕ್ಷ ರಾಮಕೃಷ್ಣ ಜಿತಕಾಮಾನಂದಜೀ, ಭಾರತೀಯ ವಿದ್ಯಾಭವನದ ಗೌರವ ಜೊತೆ ಕಾರ್ಯದರ್ಶಿ ಪ್ರೊ ಜಿ.ಆರ್. ರೈ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಸಮಕ್ಷಮದಲ್ಲಿ ಮೃದಂಗ ಕಲಾವಿದ ಬಿ. ರಮೇಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಗರು “ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ಮತ್ತು ಬೌದ್ಧಿಕ ಪ್ರಬುದ್ಧತೆ ಬೆಳೆಯುತ್ತದೆ. ಸಂಗೀತ ಆಲಿಸುವವರ ಹೃದಯ ಮೃದುವಾಗುತ್ತದೆ. ಸಂಗೀತದಿಂದ ಸಾಮರಸ್ಯ ಮೂಡುತ್ತದೆ” ಎಂದರು.

    ಸಂಗೀತ ಪರಿಷತ್ ಉಪಾಧ್ಯಕ್ಷ ಎಚ್‌. ಸುಬ್ರಹ್ಮಣ್ಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ “ಈ ವರ್ಷ 30 ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತ್ರಿಂಶತ್ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಲಾಗಿದೆ.” ಎಂದರು. ಕೃಷ್ಣಮೂರ್ತಿ ವಂದಿಸಿದರು.

    ಸಭಾಕಾರ್ಯಕ್ರಮದ ಬಳಿಕ ಬೆಂಗಳೂರಿನ ಪಟ್ಟಾಭಿರಾಮ ಪಂಡಿತ್ ಅವರಿಂದ ಹಾಡುಗಾರಿಕೆ ನಡೆಯಿತು. ತಿರುವನಂತಪುರದ ಸಂಪತ್‌ ಪಿಟೀಲಿನಲ್ಲಿ, ಬೆಂಗಳೂರಿನ ಪ್ರವೀಣ್ ಮೃದಂಗದಲ್ಲಿ ಹಾಗೂ ಸುಮುಖ ಕಾರಂತ ಖಂಜೀರದಲ್ಲಿ ಸಹಕರಿಸಿದರು. ಅಶ್ವಿನಿ ಕಲಾವಿದರನ್ನು ಪರಿಚಯಿಸಿದರು. ಎನ್.ಜೆ. ಗೋಪಾಲ್ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಂಗಳೂರಿನ ಕುಮಾರಿ ಧನಶ್ರೀ ಶಬರಾಯ, ಶ್ರೀ ಗೌತಮ್ ಭಟ್ ಹಾಗೂ ಕಾರ್ಕಳದ ಕುಮಾರಿ ಮಹತಿ ಅವರಿಂದ ಪಿಟೀಲು ಕಚೇರಿ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕೋಟೇಶ್ವರದ ಮಂಜರ ಮನೆಯಲ್ಲಿ ಭಕ್ತಿ ಭಾವಾಮೃತ- ಯಕ್ಷಗಾನಾಮೃತ ‘ಜುಗಲ್‌ಬಂದಿ’
    Next Article ವಿವಿ ಕಾಲೇಜಿನಲ್ಲಿ  ಭುವನೇಶ್ವರಿ ಹೆಗಡೆಗೆ ಸನ್ಮಾನ 
    roovari

    Add Comment Cancel Reply


    Related Posts

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರ ‘ಜಗದ್ಗುರು’ ತಾಳ ಲೋಕಾರ್ಪಣೆ

    July 14, 2026

    ಜರ್ನಿ ಥೇಟರ್ ಗ್ರೂಪ್ ಸಂಸ್ಥೆಯಿಂದ ಭಿನ್ನ ಪ್ರಯೋಗ ‘ನಾಟಕದ ಓದು’

    July 14, 2026

    ಸುರ್ ಸೊಭಾಣ್ ಸಂಗೀತ ತರಬೇತಿಯ ಮೂರನೇ ವರ್ಷದ ಉದ್ಘಾಟನೆ

    July 14, 2026

    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ

    July 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.