Subscribe to Updates

    Get the latest creative news from FooBar about art, design and business.

    What's Hot

    ಮುಂಬಯಿ ಯಕ್ಷಗಾನ ಸಮ್ಮೇಳನ 2026 ಇವರ ಸಮ್ಮೇಳನಾಧ್ಯಕ್ಷರಾಗಿ ಡಾ. ಟಿ. ಶ್ಯಾಮ ಭಟ್ ಆಯ್ಕೆ

    May 11, 2026

    ‘ಕಾವ್ಯಾಂ ವ್ಹಾಳೊ- 14’ ಕೊಂಕಣಿ ಕವಿಗೋಷ್ಠಿ

    May 11, 2026

    ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಆಂಧ್ರದ ಕಲಾತಂಡಗಳ ನೃತ್ಯ ಸೇವೆ

    May 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿಯಲ್ಲಿ ತ್ರಿಶೂರ್‌ನ ವೇಣುಗೋಪಾಲ್ ಟಿ.ಕೆ.ಯವರಿಂದ ಭಿತ್ತಿಚಿತ್ರ ಕಲಾ ಕಾರ್ಯಾಗಾರ
    Exhibition

    ಉಡುಪಿಯಲ್ಲಿ ತ್ರಿಶೂರ್‌ನ ವೇಣುಗೋಪಾಲ್ ಟಿ.ಕೆ.ಯವರಿಂದ ಭಿತ್ತಿಚಿತ್ರ ಕಲಾ ಕಾರ್ಯಾಗಾರ

    October 18, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ಉಡುಪಿಯ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ಆಯೋಜಿಸಿದ ‘ಜನಪದ ಸರಣಿ ಕಲಾ ಕಾರ್ಯಾಗಾರ’ದ ಏಳನೇ ಆವೃತ್ತಿಯು ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ದಿನಾಂಕ 14-10-2023 ಮತ್ತು 15-10-2023ರಂದು ಎರಡು ವಿಭಾಗಗಳಲ್ಲಿ ನಡೆಯಿತು.

    ಈ ಕಾರ್ಯಾಗಾರವನ್ನು ವೆಂಟನಾ ಪೌಂಡೇಶನ್‌ ಇದರ ಟ್ರಸ್ಟಿಗಳಾದ ಶಿಲ್ಪಾ ಭಟ್‌ ಇವರು ಉದ್ಘಾಟನೆ ಮಾಡಿ ಮಾತನಾಡುತ್ತಾ “ಉಡುಪಿಯ ಕಲಾಪ್ರೇಮಿಗಳಿಗೆ ಈ ತೆರನಾದ ಕಾರ್ಯಾಗಾರಗಳು ಬಹು ಉಪಯುಕ್ತವಾಗಲಿದ್ದು, ಭಾರತೀಯ ದೇಶೀಯ ಕಲೆಯ ಉಳಿಸುವಿಕೆ ಹಾಗೂ ಬೆಳೆಸುವಿಕೆಯಲ್ಲಿ ಇದೊಂದು ಮೈಲಿಗಲ್ಲಾಗಬಹುದು ಮತ್ತು ವೆಂಟನಾ ಪೌಂಡೇಶನ್ ಈ ತೆರನಾದ ಕಾರ್ಯಕ್ರಮಗಳಿಗೆ ಸದಾ ಬೆಂಬಲವನ್ನೀಯುತ್ತದೆ” ಎಂದರು.

    ಮುಖ್ಯ ಅತಿಥಿಗಳಾದ ವೈಟ್ ಲೋಟಸ್ ಹೋಟೆಲ್‌ನ ಆಡಳಿತ ನಿರ್ದೇಶಕರಾದ ಯುವ ಉದ್ಯಮಿ, ಅಜಯ್ ಪಿ. ಶೆಟ್ಟಿಯವರು “ಭಾರತವು ಹಲವಾರು ವೈವಿಧ್ಯಮಯ ಆಚಾರ-ವಿಚಾರ, ಸಂಸ್ಕೃತಿಗಳಿಂದ ಕೂಡಿದ್ದಾಗಿದೆ. ಇವುಗಳ ನಡುವೆ ಹಂಚಿಹೋಗಿರುವ ಕಲಾ ಪ್ರಕಾರಗಳನ್ನೆಲ್ಲ ಉಡುಪಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಇದರ ಪ್ರಯೋಜನವನ್ನು ಕರಾವಳಿಯ ಜನರು ಪಡೆಯಬೇಕು” ಎಂಬುದಾಗಿ ಅಭಿಪ್ರಾಯವಿತ್ತರು. ಈ ಸಂದರ್ಭದಲ್ಲಿ ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆಯವರು ಕಾರ್ಯಕ್ರಮ ನಿರೂಪಿಸಿದರು.

    ಈ ಸರಣಿಯ ಭಾಗವಾಗಿ ಕೇರಳದ ಭಿತ್ತಿಚಿತ್ರಗಳ ಬಗ್ಗೆ ಕಲಾ ಕಾರ್ಯಾಗಾರವನ್ನು ಖ್ಯಾತ ಕಲಾವಿದ ಕೇರಳದ ತ್ರಿಶೂರ್‌ನ ವೇಣುಗೋಪಾಲ್ ಟಿ.ಕೆ.ಯವರು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ “ಡಿವೈನ್ ಕೇರಳ” ಎನ್ನುವ ಕೇರಳ ಮ್ಯೂರಲ್ ಚಿತ್ರಗಳ ಕಲಾಪ್ರದರ್ಶನವನ್ನೂ ಏರ್ಪಡಿಸಿದ್ದು, ಎರ್ನಾಕುಲಂನ ಅಶ್ವತಿ ಎನ್. ಹಾಗೂ ವೇಣುಗೋಪಾಲ್‌ರ ಸುಮಾರು 15 ಜಲವರ್ಣ ಮತ್ತು ಆಕ್ರಿಲಿಕ್ ಮಾಧ್ಯಮದ ಕಲಾಕೃತಿಗಳ ಪ್ರದರ್ಶನವು 13ರಿಂದ 15ರ ತನಕ ಅಪರಾಹ್ನ 3ರಿಂದ 7ರ ತನಕ ಪ್ರದರ್ಶನಗೊಂಡವು.

    Share. Facebook Twitter Pinterest LinkedIn Tumblr WhatsApp Email
    Previous Articleಸೋಣಂಗೇರಿಯ ನಡುಮನೆಯಲ್ಲಿ ‘ಸೋನ ನೆನಪು’
    Next Article ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ‘ನೃತ್ಯೋಲ್ಲಾಸ – ಯಕ್ಷವಿಲಾಸ’ | ಅಕ್ಟೋಬರ್ 29ರಂದು 
    roovari

    Add Comment Cancel Reply


    Related Posts

    ಕಾಸರಗೋಡಿನಲ್ಲಿ ‘ರಂಗಪಂಚಮಿ’ ಚಿತ್ರಕಲೆ ಪ್ರದರ್ಶನ | ಮೇ 09

    May 6, 2026

    ಉಡುಪಿ ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಭೀಷ್ಮೋತ್ಸವ’ | ಮೇ 03

    May 1, 2026

    ಮುಂಬೈಯಲ್ಲಿ ಕರ್ನಲ್ ಡಾ. ಪರಶುರಾಮ ನಾಯಕ ಇವರ ಚಿತ್ರಕಲಾ ಪ್ರದರ್ಶನ | ಮೇ 01ರಿಂದ 03

    April 24, 2026

    ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ‘ಸಮರ್ಪಣಂ ಕಲೋತ್ಸವ – 2026’

    March 25, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.