ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಗೋಕರ್ಣನಾಥೇಶ್ವರ ಕಾಲೇಜ್ ಗಾಂಧಿ ನಗರ ಮಂಗಳೂರು ಮತ್ತು ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ (ರಿ.) ಇವರ ಸಂಯುಕ್ತಾಶ್ರಯದಲ್ಲಿ ಸಿರಿ ಚಾವಡಿ -2 ತುಳು ಇತಿಹಾಸ ಮತ್ತು ಸಂಸ್ಕೃತಿ : ಅವಲೋಕನ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 12 ಮೇ 2026ರಂದು ಬೆಳಗ್ಗೆ ಗಂಟೆ 10-00ಕ್ಕೆ ಮಂಗಳೂರಿನ ಬಿ. ದೇವದಾಸ ಕಲಾಮಂಟಪದಲ್ಲಿ ಆಯೋಜಿಸಲಾಗಿದೆ.
ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ವಸಂತ ಕಾರಂದೂರು ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಉದ್ಘಾಟನೆ ಮಾಡಲಿದ್ದಾರೆ. ಗೋಷ್ಠಿ 1ರಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷರಾದ ಡಾ. ತುಕಾರಾಮ ಪೂಜಾರಿ ಇವರು ‘ತುಳು ಸಂಸ್ಕೃತಿ – ಒರಿಪು ಕರಿಪು’, ಗೋಷ್ಠಿ 2ರಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಉಪನ್ಯಾಸಕರಾದ ಡಾ. ವಿಜಯಲಕ್ಷ್ಮಿ ನೇರಳಕೋಡಿ ಇವರು ‘ದಕ್ಷಿಣ ಕನ್ನಡೊಡ್ ನಡತಿ ಸುರುತ ಸ್ವಾತಂತ್ರ್ಯ ಸಂಗ್ರಾಮ 1834-1937’, ಗೋಷ್ಠಿ 3ರಲ್ಲಿ ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೀತಮ್ ನಾಯಕ್ ಇವರು ‘ತುಳುನಾಡ್ ದ ರಾಜಮನೆತನದ ಪೊಲಬು’, ಬ್ರಹ್ಮಾವರ ಎಸ್.ಎಮ್.ಎಸ್. ಕಾಲೇಜಿನ ಅಭಿಜ್ಞಾ ಹೆಗ್ಡೆ ಇವರು ‘ತುಳುನಾಡ್ ದ ಧಾರ್ಮಿಕ ಪೊಲಬು’ ಹಾಗೂ ಮಂಗಳೂರಿನ ಎಸ್.ಡಿ.ಎಂ. ಕಾಲೇಜಿನ ಸನ್ನಿಧಿ ಇವರು ‘ತುಳುನಾಡ್ ದ ವಾಸ್ತು ಇಸೇಸೊಲು’ ಎಂಬ ವಿಷಯದ ವಿಷಯ ಮಂಡನೆ ಮಾಡಲಿದ್ದಾರೆ.


