Subscribe to Updates

    Get the latest creative news from FooBar about art, design and business.

    What's Hot

    ಕೊಂಚಾಡಿ ಶಾಲೆಯಲ್ಲಿ 115ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಡಿಸೆಂಬರ್ 17

    December 16, 2025

    ಮೂಡುಬಿದಿರೆಯ ರಾಜ ಸಭಾಂಗಣದಲ್ಲಿ ‘ಎಕ್ಸಲೆಂಟ್ ಸಂಗೀತ ಸಂಜೆ’ | ಡಿಸೆಂಬರ್ 18

    December 16, 2025

    ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಇವರು ‘ವಡ್ಡರ್ಸೆ ಪ್ರಶಸ್ತಿ’ಗೆ ಆಯ್ಕೆ

    December 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಂಕನಾಡಿ ಗರೋಡಿಯಲ್ಲಿ ‘ತುಳು ತಾಳಮದ್ದಲೆ ಸಪ್ತಾಹ’ | ಡಿಸೆಂಬರ್ 7ರಿಂದ 13
    Commemoration

    ಕಂಕನಾಡಿ ಗರೋಡಿಯಲ್ಲಿ ‘ತುಳು ತಾಳಮದ್ದಲೆ ಸಪ್ತಾಹ’ | ಡಿಸೆಂಬರ್ 7ರಿಂದ 13

    December 2, 2025Updated:December 4, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತುಳು ಕೂಟ (ರಿ.) ಕುಡ್ಲ ಮತ್ತು ಸರಯೂ ಬಾಲ ಯಕ್ಷ ವೃಂದ ಕೋಡಿಕಲ್ ಇವರ ವತಿಯಿಂದ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹವನ್ನು ದಿನಾಂಕ 07ರಿಂದ 13 ಡಿಸೆಂಬರ್ 2025ರವರೆಗೆ ಪ್ರತಿದಿನ ಸಂಜೆ 5-00 ಗಂಟೆಗೆ ಮಂಗಳೂರಿನ ಕಂಕನಾಡಿ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ನಡೆಯಲಿದೆ.

    ದಿನಾಂಕ 07 ಡಿಸೆಂಬರ್ 2025ರಂದು ಗರೋಡಿ ಕ್ಷೇತ್ರ ಅಧ್ಯಕ್ಷ ಚಿತ್ತರಂಜನ್ ಗರೋಡಿ ಇವರು ಸಪ್ತಾಹವನ್ನು ಉದ್ಘಾಟಿಸಲಿದ್ದು, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಬಿ. ಕೋಟ್ಯಾನ್ ಪೆಲತ್ತಡಿ ಅತಿಥಿಯಾಗಿ ಭಾಗವಹಿಸುವರು. ದಿನಾಂಕ 13 ಡಿಸೆಂಬರ್ 2025ರಂದು ಸಮಾರೋಪ ಸಮಾರಂಭದಲ್ಲಿ ದಾಮೋದರ ನಿಸರ್ಗ ಇವರ ಒಡನಾಡಿ ಜೆ.ಎ. ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು. ತುಳುಕೂಟ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಬಿ.ಎಸ್‌.ಎನ್‌.ಎಲ್. ನಿವೃತ್ತ ಅಧಿಕಾರಿ ನಾರಾಯಣ ಬಿ.ಡಿ. ಅತಿಥಿಯಾಗಿ ಪಾಲ್ಗೊಳ್ಳುವರು.

    ದಿನಾಂಕ 07 ಡಿಸೆಂಬರ್ 2025ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ‘ಪಗರಿದ ಸಂಕ’, ದಿನಾಂಕ 08 ಡಿಸೆಂಬರ್ 2025ರಂದು ಶ್ರೀ ವಾಗೀಶ್ವರಿ ಕಲಾವರ್ಧಕ ಯಕ್ಷಗಾನ ಮಂಡಳಿ ರಥಬೀದಿ ಮಂಗಳೂರು ಇವರಿಂದ ‘ತುಳುನಾಡ ಬಲ್ಲ್ಯೇಂದ್ರೆ’, ದಿನಾಂಕ 09 ಡಿಸೆಂಬರ್ 2025ರಂದು ಯಕ್ಷಕಲಾ ಸುರತ್ಕಲ್ ಇವರಿಂದ ‘ಬೀರೆ ಸುಧನ್ವೆ’, ದಿನಾಂಕ 10 ಡಿಸೆಂಬರ್ 2025ರಂದು ಯಕ್ಷ ಮಂಜುಳಾ ಮಹಿಳಾ ತಾಳಮದ್ದಳ ಬಳಗ ಕದ್ರಿ ಇವರಿಂದ ‘ಯಕ್ಷಮಣಿ’, ದಿನಾಂಕ 11 ಡಿಸೆಂಬರ್ 2025ರಂದು ಸರಯೂ ಯಕ್ಷವೃಂದ ಕೋಡಿಕಲ್ ಇವರಿಂದ ‘ಕಾನದ ಕೌಶಿಕೆ’, ದಿನಾಂಕ 12 ಡಿಸೆಂಬರ್ 2025ರಂದು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ಇವರಿಂದ ‘ಕೋಟಿಚೆನ್ನಯ’ ತಾಳಮದ್ದಳೆ ನಡೆಯಲಿದೆ. ದಿನಾಂಕ 13 ಡಿಸೆಂಬರ್ 2025ರಂದು ಸರಯೂ ಯಕ್ಷ ಬಳಗದವರಿಂದ ‘ಮಾಯಕೊದ ಬಿನ್ನೆದಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

    baikady commemoration roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಬ್ಯಾರಿ ಅಕಾಡೆಮಿಯಿಂದ ಭಾಷಾಂತರ, ಭಾಷಣ ಸ್ಪರ್ಧೆ | ಕೊನೆಯ ದಿನಾಂಕ ಡಿಸೆಂಬರ್ 10
    Next Article ಶ್ರೀ ಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡ ‘ಕಿಶೋರ ಯಕ್ಷಗಾನ ಸಂಭ್ರಮ’
    roovari

    Add Comment Cancel Reply


    Related Posts

    ಕೊಂಚಾಡಿ ಶಾಲೆಯಲ್ಲಿ 115ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಡಿಸೆಂಬರ್ 17

    December 16, 2025

    ಮೂಡುಬಿದಿರೆಯ ರಾಜ ಸಭಾಂಗಣದಲ್ಲಿ ‘ಎಕ್ಸಲೆಂಟ್ ಸಂಗೀತ ಸಂಜೆ’ | ಡಿಸೆಂಬರ್ 18

    December 16, 2025

    ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಇವರು ‘ವಡ್ಡರ್ಸೆ ಪ್ರಶಸ್ತಿ’ಗೆ ಆಯ್ಕೆ

    December 16, 2025

    ಆಕೃತಿ ಆಶಯ ಪ್ರಕಾಶನದ ‘ಕರಾವಳಿ ಕವನಗಳು’ ಪುಸ್ತಕ ಬಿಡುಗಡೆ ಸಮಾರಂಭ

    December 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.