ಒಡಿಯೂರು : ತುಲುವೆರೆ ಕಲ ಟ್ರಸ್ಟ್ (ರಿ.) ಇದರ ವತಿಯಿಂದ ‘ತುಲುವೆರೆ ಕಲ ವರ್ಸೊಚ್ಚಯ’ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ದಿನಾಂಕ 24 ಮೇ 2026ರಂದು ಬೆಳಗ್ಗೆ 9-30 ಗಂಟೆಗೆ ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ನಡೆಯಲಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಇವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮಂಗಳೂರಿನ ತುಲುವೆರೆ ಕಲ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸುವರು. ‘ಬಾನ ಚಂದ್ರಮೆ’, ‘ಪೇರ್ ಪಂರ್ದ್’, ‘ಗುತ್ತುಗೊಂಜಿ ಕಲತ ಸುತ್ತು’ ಮತ್ತು ‘ಪದ ಪಾಡ್ದನ’ ತುಳು ಕೃತಿಗಳನ್ನು ನಾರಾಯಣ ರೈ ಕುಕ್ಕುವಳ್ಳಿ, ರೂಪಕಲಾ ಆಳ್ವ, ಮಿಥುನ್ ಉಡುಪ , ಮುದ್ದು ಮೂಡುಬೆಳ್ಳೆ ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಮಲಾರ ಜಯರಾಮ ರೈ ಇವರ ಅಧ್ಯಕ್ಷತೆಯಲ್ಲಿ ಬೊಲ್ಪು ದಾರಗೆ ಕವಿಗೋಷ್ಠಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ‘ಕಲತ ಬೊಲ್ಲಿ’ ಪ್ರಶಸ್ತಿಯನ್ನು ಸಿರಿ ವಿಶ್ವನಾಥ ಕುಲಾಲ್ ಮಿತ್ತೂರು ಇವರಿಗೆ ಪ್ರದಾನ ಮಾಡಲಾಗುವುದು. ಪ್ರಶಾಂತ್ ಆಚಾರ್ಯ ಮತ್ತು ಹಂಸರಾಗ ಶೆಟ್ಟಿ ಇವರಿಗೆ ‘ಗುತ್ತು ಬರವು’, ದಿವ್ಯಾ ರೈ ಪೆರುವಾಜೆ, ಪೆರ್ಮುಖ ಸುಬ್ರಹ್ಮಣ್ಯ ಭಟ್ ಮತ್ತು ಶಾರದಾ ತುಳುನಾಡ್ ಇವರಿಗೆ ‘ಮಕ್ಕಳ ಕವಿತೆ’ ಹಾಗೂ ಬನಶ್ರೀ ಅವಿನಾಶ್, ಪ. ರಾಮಕೃಷ್ಣ ಶಾಸ್ತ್ರಿ ಮತ್ತು ಸವಿತಾ ಯಸ್. ಭಟ್ ಅದ್ವಾಯಿ ಇವರಿಗೆ ‘ಮಕ್ಕಳ ಕಥಾ’ ಸ್ಪರ್ಧೆಯ ಬಹುಮಾನ ನೀಡಿ ಗೌರವಿಸಲಾಗುವುದು.

