ದಾವಣಗೆರೆ : ಚೇತನ ಫೌಂಡೇಶನ್ ಧಾರವಾಡ ಇವರ ವತಿಯಿಂದ ದಿನಾಂಕ 12 ಏಪ್ರಿಲ್ 2026ರಂದು ರವಿವಾರ ದಾವಣಗೆರೆ ಸೀತಮ್ಮ ಕಾಲೇಜು ಎದುರು, ರೋಟರಿ ಭವನದಲ್ಲಿ ‘ವಚನ ವೈಭವ’ ಬಸವ ಜಯಂತಿಯ ವಿಶೇಷ ಕಾರ್ಯಕ್ರಮ ಜರುಗಲಿದೆ. ಈ ಸಮಾರಂಭದಲ್ಲಿ ವಚನ ವಾಚನ, ವಚನ ಗಾಯನ, ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿ ಡಾ. ಇಂದಿರಾ ಪ್ರಕಾಶ್ ಎಸ್.ಎಸ್. ಇವರು ವಹಿಸಲಿದ್ದು, ದಾವಣಗೆರೆ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಾ. ಕೆ.ಬಿ. ಪರಮೇಶ್ವರಪ್ಪ ಇವರು ಉದ್ಘಾಟನೆ ಮಾಡಲಿದ್ದಾರೆ. ಶಿಕ್ಷಕರು ಸಮಾಜ ಸೇವಕರಾದ ಬಿ. ರಂಗಸ್ವಾಮಿ ಇವರು ಉಪನ್ಯಾಸ ನೀಡಲಿದ್ದು, ಧಾರವಾಡದ ಚೇತನ ಫೌಂಡೇಶನ್ ಇದರ ಅಧ್ಯಕ್ಷರಾದ ಡಾ. ಚಂದ್ರಶೇಖರ ಮಾಡಲಗೇರಿ ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

