Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ

    June 13, 2026

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ಕಲಾಂಗಣದಲ್ಲಿ ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪ ಶಿಬಿರ ಆರಂಭ

    June 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಬಾಲ ಲೀಲಾ’ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
    Camp

    ‘ಬಾಲ ಲೀಲಾ’ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

    April 15, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರವು ದಿನಾಂಕ 14-04-2024ರ ಭಾನುವಾರದಂದು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಮಾಪನಗೊಂಡಿತು.

    ಇದೇ ಸಂದರ್ಭದಲ್ಲಿ ವೀಣೆ ಹಾಗೂ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ವಿದುಷಿ ಪವನಾ ಬಿ. ಆಚಾರ್‌ ಇವರಿಗೆ ‘ಕಲಾ ಸಿಂಧು’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು “ಕಲೆಯ ಬಗೆಗಿನ ಪಾರಂಪರಿಕ ಜ್ಞಾನವನ್ನು ಮಕ್ಕಳೆಲ್ಲ ಅರಿತಾಗ ಮಾತ್ರ ನಮ್ಮ ಶರೀರ ಮತ್ತು ಮನಸ್ಸು ನೆಮ್ಮದಿಯಿಂದಿರುತ್ತದೆ. ಕೇಳುವ ಮತ್ತು ನೋಡುವ ಹಸಿವನ್ನು ಚಿಣ್ಣರು ಬೆಳೆಸಿಕೊಳ್ಳಬೇಕು.” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಯು. ವಿಶ್ವನಾಥ ಶೆಣೈಯವರು ತಾವು ನಡೆದು ಬಂದ ದಾರಿಯನ್ನು ಮಕ್ಕಳಿಗೆ ವಿವರಿಸುತ್ತ ಚಿಣ್ಣರ ಶಿಬಿರವು ಹೇಗೆ ಮಕ್ಕಳ ಬದುಕನ್ನು ಹಸನಾಗುವಂತೆ ರೂಪಿಸಬಲ್ಲುದು ಎಂಬುದಾಗಿ ವಿವರಿಸಿದರು. ಇನ್ನೋರ್ವ ಅತಿಥಿಗಳಾದ ಆನಂದ ಕಾರ್ನಾಡ್‌ ಮಾತನಾಡಿ “ಸ್ವಚ್ಚಂದದ ಪರಿಸರದಲ್ಲಿ ಭಾವನಾ ಫೌಂಡೇಶನ್ ಸಂಘಟಿಸುತ್ತಿರುವ ಬೇಸಿಗೆ ಶಿಬಿರದಲ್ಲಿನ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.” ಎಂಬುದಾಗಿ ಅಭಿಪ್ರಾಯವಿತ್ತರು. ಇದೇ ಸಂದರ್ಭದಲ್ಲಿ ‘ಭಾವನಾ ಪುರಸ್ಕಾರ’ವನ್ನು ಹೋಂ ಡಾಕ್ಟರ್ ಫೌಂಡೇಶನಿನ ಪ್ರವರ್ತಕರಾದ ಡಾ. ಶಶಿಕಿರಣ್ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗುರು ಹಾವಂಜೆ ಮಂಜುನಾಥ ರಾವ್ ವಹಿಸಿದ್ದರು. ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ, ವಿದುಷಿ ಅಕ್ಷತಾ ವಿಶು ರಾವ್ ಸನ್ಮಾನಪತ್ರ ವಾಚಿಸಿ, ವಿಶುರಾವ್ ಹಾವಂಜೆ ಧನ್ಯವಾದಗೈದರು.

    Share. Facebook Twitter Pinterest LinkedIn Tumblr WhatsApp Email
    Previous Articleತುಳುಕೂಟ ಕುಡ್ಲ ಸಂಸ್ಥೆ ಆಯೋಜಿಸಿದ ‘ತುಳುವೆರೆ ಬಿಸು ಪರ್ಬ ಸಂಭ್ರಮೊ’
    Next Article ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ಶಾಸ್ತ್ರೀಯ ಸಂಗೀತ ಕಛೇರಿ
    roovari

    Add Comment Cancel Reply


    Related Posts

    ಕಲಾಂಗಣದಲ್ಲಿ ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪ ಶಿಬಿರ ಆರಂಭ

    June 13, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಇನ್ನೊಂದು ದಿಟ್ಟ ಹೆಜ್ಜೆ ‘ಸೂತ್ರ ಸಂಕಲ್ಪ’

    June 3, 2026

    ಉಡುಪಿಯ ಐ.ವೈ.ಸಿ. ಸಭಾಭವನದಲ್ಲಿ ಉದ್ಘಾಟನೆಗೊಂಡ ‘ಯಕ್ಷಗಾನ ಮಾರ್ಗದರ್ಶಿ ಶಿಬಿರ’

    June 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.