Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬಜ್ಜೋಡಿಯಲ್ಲಿ ‘ಮಾಣ್ಕಾಂ ಮೊತಿಯಾಂ -2’ ಮಕ್ಕಳ ರಜಾ ಶಿಬಿರದ ಸಮಾರೋಪ
    Camp

    ಬಜ್ಜೋಡಿಯಲ್ಲಿ ‘ಮಾಣ್ಕಾಂ ಮೊತಿಯಾಂ -2’ ಮಕ್ಕಳ ರಜಾ ಶಿಬಿರದ ಸಮಾರೋಪ

    April 24, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ‘ಮಾಣ್ಕಾಂ ಮೊತಿಯಾಂ-2’ ಎಂಬ ಮಕ್ಕಳ ಮೂರು ದಿನಗಳ ರಜಾ ಶಿಬಿರದ ಸಮಾರೋಪ ಕಾರ್ಯಕ್ರಮವು ದಿನಾಂಕ 22 ಏಪ್ರಿಲ್ 2026ರಂದು ಚರ್ಚ್ ಸಭಾಂಗಣದಲ್ಲಿ ನೆರವೇರಿತು.

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ನೆರೆದ ಎಲ್ಲಾ ಅತಿಥಿಗಳನ್ನು, ಶಿಬಿರಾರ್ಥಿಗಳನ್ನು ಹಾಗೂ ತರಬೇತಿದಾರರನ್ನು ಸ್ವಾಗತಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶ್ರೀ ಕ್ರಿಸ್ಟೋಫರ್ ನಿನಾಸಂ ಹಾಗೂ ವಂದನೀಯ ಗುರು ಐವನ್ ಡಿಸೋಜಾರವರು ಪ್ರಮಾಣ ಪತ್ರವನ್ನು ವಿತರಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಕ್ರಿಸ್ಟೋಫರ್ ನಿನಾಸಂರವರು ಮಾತಾನಾಡಿ, ಶಿಬಿರದಲ್ಲಿ ಕಲಿತ ಪ್ರತಿಯೊಂದು ವಿಚಾರವನ್ನು ಮನಗಂಡು, ಮುಂದಿನ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಕರೆಕೊಟ್ಟರು. ಗೌರವ ಅತಿಥಿಗಳಾದ ವಂದನೀಯ ಗುರು ಐವನ್ ಡಿಸೋಜಾರವರು ಮಾತಾನಾಡಿ, ಚಿಕ್ಕ ವಯಸ್ಸಿನಲ್ಲಿ ಕಲಿತ ವಿಷಯಗಳನ್ನು ನಾವು ಜೀವನದುದ್ದಕ್ಕೂ ರೂಡಿಸಿಕೊಳ್ಳುತ್ತೇವೆ ಹಾಗೆಯೇ ಈ ಶಿಬಿರದಲ್ಲಿ ಕಲಿತ ವಿಷಯಗಳನ್ನು ಜೀವನಕ್ಕೆ ದಾರಿದೀಪವನ್ನಾಗಿಸಿಕೊಂಡು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದು ಮಕ್ಕಳನ್ನು ಹುರಿದುಂಬಿಸಿದರು.

    ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿ ಇದರ ಪ್ರಧಾನ ಧರ್ಮಗುರುಗಳಾದ ವಂದನೀಯ ಗುರು ದೊಮಿನಿಕ್ ವಾಸ್ರವರು ಮಕ್ಕಳನ್ನು ಉದ್ದೇಶಿಸಿ, ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸುವ ಕರ್ತವ್ಯ ಈಗಿನ ಮಕ್ಕಳ ಕೈಯಲ್ಲಿದೆ; ಹಾಗಾಗಿ ಕೊಂಕಣಿ ಭಾಷೆಯನ್ನು ಮಾತಾನಾಡಿ, ಅದರ ಉಪಯೋಗನ್ನು ಇನ್ನಷ್ಟು ಧೃಡಪಡಿಸಿ ಎಂದು ಶಿಬಿರದ ಮಕ್ಕಳಿಗೆ ಮನದಟ್ಟು ಮಾಡಿದರು. ಶಿಬಿರದ ಗಾಯನ ತರಬೇತಿದಾರರಾದ ಡಿಯಲ್ ಡಿಸೋಜಾ, ನೃತ್ಯ ತರಬೇತಿದಾರರಾದ ರಾಹುಲ್ ಪಿಂಟೊ ಹಾಗೂ ಇತರ ತರಬೇತಿದಾರರಿಗೆ ಧನ್ಯವಾದ ತಿಳಿಸಲಾಯಿತು. ಸಿಯಾನ್ನ ವೇಗಸ್ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಆಶೆಲ್ ಪಿಂಟೊರವರು ಧನ್ಯವಾದಗೈದರು.

    baikady camp dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಪೊಳಲಿಯ ಗ್ರಾಮಾಯಣ
    Next Article ಕಲಾವಿದ ರಾಜೇಶ್ ಕೆಂಚನಕೆರೆಗೆ ‘ಕೋಡು‌ ಗುರುರಾಜ ಭಟ್ ಪ್ರಶಸ್ತಿ’
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026

    ಬಾಲ್ಯದಿಂದಲೇ ಅಭಿರುಚಿ ಬೆಳೆಸಿಕೊಳ್ಳಬೇಕು – ಡಾ. ಯಶವಂತ ಎನ್. ನಾಯಕ್

    May 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.