ಮುಳ್ಳೇರಿಯ : ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ‘ವಾಲಿಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆಯು ದಿನಾಂಕ 17 ಮಾರ್ಚ್ 2026ರಂದು ಜರಗಿತು.
ಭಾಗವತರಾಗಿ ಹೇಮಾಸ್ವಾತಿ ಕುರಿಯಾಜೆ, ನಿತೇಶ್ ಕುಮಾರ್, ವೆಂಕಣ ಮೂಲೆ ಮತ್ತು ವಿದ್ಯಾಶ್ರೀ ಈಶ್ವರಮಂಗಲ, ಚೆಂಡೆ ಮತ್ತು ಮೃದಂಗ ವಾದನದಲ್ಲಿ ವಿಷ್ಣು ಶರಣ ಬನಾರಿ, ಶ್ರೀಧರ ಆಚಾರ್ಯ ಈಶ್ವರಮಂಗಲ, ಪೆರಾಜೆ ಆನಂದ, ಚಕ್ರತಾಳದಲ್ಲಿ ಶ್ರೀದೇವ್ ಹಾಗೂ ಪಾತ್ರವರ್ಗದಲ್ಲಿ ಶ್ರೀರಾಮನಾಗಿ ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬಳೆ, ವಾಲಿಯ ಪಾತ್ರದಲ್ಲಿ ಪ್ರೊ. ವೆಂಕಟ್ರಾಮ ಭಟ್ ಸುಳ್ಯ ಹಾಗೂ ಸುಗ್ರೀವನ ಪಾತ್ರದಲ್ಲಿ ಬೆಳ್ಳಿಪ್ಪಾಡಿ ಸದಾಶಿವ ರೈ ಭಾಗವಹಿಸಿದ್ದರು.

ಇದೇ ಸಂದರ್ಭ ಯಕ್ಷಗುರು ವಿಶ್ವವಿನೋದ ಬನಾರಿ ಇವರು ಉಪಸ್ಥಿತರಿದ್ದು, ಇವರು ರಚಿಸಿದ ಸೀಮೆಯ ಒಡೆಯ ಮಹಾಲಿಂಗೇಶ್ವರನ ಹಾಡನ್ನು ಉದಯೋನ್ಮುಖ ಭಾಗವತೆ ವಿದ್ಯಾಶ್ರೀ ಹಾಡಿದರು. ಗಣರಾಜ ಕುಂಬಳೆಯವರನ್ನು ನೆನಪಿನ ಕಾಣಿಕೆ ನೀಡಿ ಉತ್ಸವ ಸಮಿತಿ ಪರವಾಗಿ ಬೆಳ್ಳಿಪಾಡಿ ಸದಾಶಿವ ರೈ ಗೌರವಿಸಿದರು. ಕೃಷ್ಣಪ್ಪ ಮಾಸ್ತರ್ ಸ್ವಾಗತಿಸಿ, ವಿವೇಕ ಅಡೂರು ವಂದಿಸಿದರು.
