ಮಧ್ಯ ಪ್ರದೇಶ: ಮಧ್ಯ ಪ್ರದೇಶದ ಇಂದೋರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಹೋಳ್ಕರ್ ಸಂಗೀತ ಸಮ್ಮೇಳನಕ್ಕೆ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ವತಿಯಿಂದ ಕುಮಾರಿ ವಾಣಿ ಹಂಚಿನಮನಿ ಆಯ್ಕೆಯಾಗಿದ್ದಾರೆ. ವಿಜ್ಞಾನ ಪದವೀಧರೆಯಾದ ವಾಣಿ ಹಿಂದೂಸ್ತಾನಿ ಸಂಗೀತದ ವಿದ್ಯಾರ್ಥಿನಿ.
ಪ್ರತಿಭೆ, ಪರಿಶ್ರಮ ಮತ್ತು ವಿನಯವನ್ನು ಹೊಂದಿರುವ ವಾಣಿ ಬಡತನದಲ್ಲಿ ಅರಳಿದ ಪ್ರತಿಭೆ. ಕಲಾನಿಧಿ ಫೌಂಡೇಶನ್ ಚೆನ್ನೈ ವತಿಯಿಂದ ಯುವ ಸಂಗೀತಗಾರರಿಗೆ ನೀಡಲಾಗುವ ರೂ.25,000/-ಗಳ ಪ್ರೋತ್ಸಾಹ ಧನವನ್ನೂ ಪಡೆದಿರುವ ಇವರಿಗೆ ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆ.
ಕುಮಾರಿ ವಾಣಿ ಹಂಚಿನಮನಿ ಅವರಿಗೆ ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ.ಸುಭಾಷ್ ಪಟ್ಟಾಜೆ ಅಭಿನಂದನೆ ಸಲ್ಲಿಸಿದ್ದಾರೆ.