ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2026ರ ವಿನೂತನ ಕಾರ್ಯಕ್ರಮ ಸರಣಿಯ ಮೇ ತಿಂಗಳ ಕಾರ್ಯಕ್ರಮದಲ್ಲಿ ಉಪ್ಪಿನಕುದ್ರು ‘ಯಕ್ಷೇಶ್ವರಿ ತಂಡ’ ಇವರಿಂದ ‘ವೈವಿಧ್ಯಮಯ ಮನೋರಂಜನಾ’ ಕಾರ್ಯಕ್ರಮವನ್ನು ದಿನಾಂಕ 24 ಮೇ 2026ರಂದು ಸಂಜೆ 4-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸತತ ಹತ್ತನೇ ವರ್ಷದಲ್ಲಿ 119ನೇ ಕಾರ್ಯಕ್ರಮ ಇದಾಗಿದ್ದು, ಇದೇ ಸಂದರ್ಭದಲ್ಲಿ ಬ್ಯಾನರ್ ಕಲಾವಿದರಾದ ಕೆ.ಕೆ. ರಾಮನ್ ಕುಂದಾಪುರ ಇವರನ್ನು ಸನ್ಮಾನಿಸಲಾಗುವುದು.

