ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಸಮುದಾಯದ ಕೇಂದ್ರ ಸಂಸ್ಥೆಯಾದ ವಿಶ್ವಕರ್ಮ ಒಕ್ಕೂಟದ ವತಿಯಿಂದ ದಿನಾಂಕ 07 ಜೂನ್ 2026ರಂದು ಕಟಪಾಡಿ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳ ವಿಶ್ವಕರ್ಮ ಸಮುದಾಯದವರಿಗಾಗಿ ಏರ್ಪಡಿಸಿದ್ದ ‘ಭಜನಾ ವೈಭವ 2026’ ಸಾಂಪ್ರದಾಯಿಕ ಭಜನಾ ಸ್ಪರ್ಧೆಯಲ್ಲಿ ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ತಿನ ಯುವ ತಂಡ ಪ್ರಥಮ ಸ್ಥಾನ ಪಡೆಯಿತು.

ಶ್ರದ್ಧಾ ಗುರುದಾಸ್, ಅಮೃತಾ ಎ.ಜಿ.ಎಸ್., ನವಮ್ ಆಚಾರ್ಯ ಮುಡಿಪು, ತೇಜಸ್ ಆಚಾರ್ಯ ಕೃಷ್ಣಾಪುರ, ಗುರು ಅಭಿಷೇಕ್, ಧೃತಿ, ಸಾನ್ವಿಕಾ ಪ್ರಶಾಂತ್ ಇವರನ್ನೊಳಗೊಂಡ ಈ ತಂಡವು ಭಾಗವಹಿಸಿದ್ದ ಇಪ್ಪತ್ತು ತಂಡಗಳಲ್ಲಿ ಅಗ್ರ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ತಂಡವನ್ನು ಕೆ.ಜಿ.ಎಫ್. ಸಿನಿಮಾದ ಸಂಗೀತ ನಿರ್ದೇಶಕ ರವಿ ಬನ್ನೂರು ಇವರು ಬಹುಮಾನ ವಿತರಿಸಿ ಅಭಿನಂದಿಸಿದರು.
ಕುಳಾಯಿ ಶ್ರೀ ಕಾಳಿಕಾಂಬಾ ದೇವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ದ್ವಿತೀಯ ಹಾಗೂ ಬಂಟ್ವಾಳ ಸೂರಿಕುಮೇರು ಶ್ರೀ ಕಾಳಿಕಾಂಬಾ ಸತ್ಯಸಾಯಿ ಭಜನಾ ಮಂಡಳಿ ತೃತೀಯ ಪ್ರಶಸ್ತಿಯನ್ನು ಗೆದ್ದಿರುತ್ತದೆ. ಶಿಸ್ತುಬದ್ಧ ತಂಡವಾಗಿ ಉಡುಪಿ ಕುಂಜಿಬೆಟ್ಟು ಶ್ರೀ ಗಾಯತ್ರಿ ಮಹಿಳಾ ಮಂಡಳಿ ವಿಶೇಷ ಬಹುಮಾನಕ್ಕೆ ಪಾತ್ರವಾಯಿತು.

ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ, ಉಪಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ಕ್ಷೇತ್ರದ ಮೊಕ್ತೇಸರ ಕೆ. ಮುರಹರಿ ಆಚಾರ್ಯ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಹರೀಶ ಅಚಾರ್ಯ, ಉದ್ಯಮಿ ಪಾಂಡುರಂಗ ಆಚಾರ್ಯ ಪ್ರಶಸ್ತಿ ವಿತರಿಸಿದರು. ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷರಾದ ಎಸ್.ಪಿ. ಗುರುದಾಸ್, ಖಜಾಂಚಿ ಎ.ಜಿ. ಸದಾಶಿವ, ಸಂಘಟನಾ ಕಾರ್ಯದರ್ಶಿಗಳಾದ ಯಜೇಶ್ವರ ಕೃಷ್ಣಾಪುರ, ಅರ್ಚನಾ ಆಕಾಶಭವನ, ಸದಸ್ಯರಾದ ಸ್ನೇಹಾ ಗುರುದಾಸ್, ಪ್ರಶಾಂತ್ ಕೋಟೆಕಾರ್. ಸುನಿಲ್ ಟಿ. ಮುಂತಾದವರು ಭಾಗವಹಿಸಿದ್ದರು. ಯುವ ತಂಡದ ಈ ವಿಶೇಷ ಸಾಧನೆಗೆ ಅಧ್ಯಕ್ಷರಾದ ಎಸ್.ಪಿ. ಗುರುದಾಸ್ ಅಭಿನಂದಿಸಿದ್ದಾರೆ.

ದ್ವಿತೀಯ ಬಹುಮಾನ ವಿಜೇತ ತಂಡ

ತೃತೀಯ ಬಹುಮಾನ ವಿಜೇತ ತಂಡ

ಶಿಸ್ತುಬದ್ಧ ತಂಡ
