Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಚಾರಿ ಥಿಯೇಟರ್ ಎಂಟಿಸ್ಪೇಸಿನಲ್ಲಿ ವಾರಾಂತ್ಯ ‘ಅಭಿನಯ ತರಗತಿಗಳು’ | ಅಕ್ಟೋಬರ್ 19
    Drama

    ಸಂಚಾರಿ ಥಿಯೇಟರ್ ಎಂಟಿಸ್ಪೇಸಿನಲ್ಲಿ ವಾರಾಂತ್ಯ ‘ಅಭಿನಯ ತರಗತಿಗಳು’ | ಅಕ್ಟೋಬರ್ 19

    September 20, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಸಂಚಾರಿ ಥಿಯೇಟರ್ ಇದರ ವತಿಯಿಂದ 20 ವರ್ಷದ ರಂಗ ಸಂಭ್ರಮದ ಪ್ರಯುಕ್ತ ಆರು ತಿಂಗಳ ವಾರಾಂತ್ಯ ‘ಅಭಿನಯ ತರಗತಿಗಳು’ ದಿನಾಂಕ 19 ಅಕ್ಟೋಬರ್ 2024ರಿಂದ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಸಂಚಾರಿ ಥಿಯೇಟರ್ ಎಂಟಿಸ್ಪೇಸಿನಲ್ಲಿ ಪ್ರಾರಂಭವಾಗಲಿವೆ. ಹೆಚ್ಚಿನ ಮಾಹಿತಿಗಾಗಿ 8884345569, 8971186882, 9844115903 ಮತ್ತು 9611234993 ಸಂಪರ್ಕಿಸಿರಿ.

    ಸಂಚಾರಿ ಥಿಯೇಟರ್ : 2004ರಲ್ಲಿ ಅಸ್ತಿತ್ವಕ್ಕೆ ಬಂದ ಸಂಚಾರಿ ಥಿಯೇಟರ್, ಬೆಂಗಳೂರಿನ ಪ್ರಮುಖ ರಂಗ ಸಂಸ್ಥೆಗಳಲ್ಲಿ ಒಂದು. ನಾಟಕಗಳು, ಅಭಿನಯ ಕಾರ್ಯಾಗಾರಗಳು, ನೇಪಥ್ಯ ಹಾಗೂ ರಂಗ ಸಂಗೀತ ಕುರಿತ ಶಿಬಿರಗಳನ್ನು ಪ್ರತಿವರ್ಷ ನಡೆಸುತ್ತಾ ಬಂದಿರುವ ಸಂಚಾರಿ ಥಿಯೇಟರ್ ಮಕ್ಕಳ ರಂಗಭೂಮಿ ಕುರಿತಂತೆ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಾಹಿತ್ಯಿಕ ಚಟುವಟಿಕೆಗಳು ಮತ್ತು ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವ ರಂಗ ಪ್ರಯೋಗಗಳೊಂದಿಗೆ ಯುವಕರನ್ನು ರಂಗಭೂಮಿಗೆ ಕರೆತರುವ ನಿಟ್ಟಿನಲ್ಲಿ “ಪೂರ್ವರಂಗ” ಅಭಿನಯ ಕಾರ್ಯಾಗಾರವನ್ನು ಪ್ರತಿವರ್ಷ ನಡೆಸುತ್ತಾ ಬಂದಿದೆ. ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರುವ ಉತ್ಸಾಹಿ, ಪ್ರತಿಭಾವಂತ ಯುವಕರ ತಂಡವನ್ನು ಹೊಂದಿರುವ ಸಂಚಾರಿ ಥಿಯೇಟರ್ ತಾನು ಅಸ್ತಿತ್ವಕ್ಕೆ ಬಂದಂದಿನಿಂದ ಸೃಜನಶೀಲ, ಸಾಂಸ್ಕೃತಿಕ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

    ಕನ್ನಡ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳನ್ನು ಸಂಚಾರಿ ಥಿಯೇಟರ್ ತನ್ನ ರಂಗ ಪ್ರಯೋಗಕ್ಕೆ ಬಳಸಿಕೊಂಡಿದೆ. ಸುಮಾರು 29 ನಾಟಕಗಳನ್ನು ರಂಗದ ಮೇಲೆ ತಂದಿದೆ. ಅವುಗಳಲ್ಲಿ ಮುಖ್ಯವಾದವು ಊರ್ಮಿಳಾ, ಧರೆಯೊಳಗಿನ ರಾಜಕಾರಣ, ಅರಹಂತ, ಕಮಲಮಣಿ ಕಾಮಿಡಿ ಕಲ್ಯಾಣಿ, ನರಿಗಳಿಗೇಕೆ ಕೋಡಿಲ್ಲ ? ಹೀಗೆರಡು ಕತೆಗಳು, ವೈದೇಹಿಯವರ ಕವನಗಳ ರಂಗಪ್ರಯೋಗ “ವ್ಯಾನಿಟಿ ಬ್ಯಾಗ್”, ಪಿನೋಕಿಯೋ, ಮಿಸ್ ಅಂಡರ್ ಸ್ಟ್ಯಾಂಡಿಂಗ್, ವೆನಿಸ್ಸಿನ ವ್ಯಾಪಾರ, ರಂಗ ಜಂಗಮ, ಕೈಲಾಸಂ ಕೀಚಕ ಮುಂತಾದ ನಾಟಕಗಳನ್ನು ರಂಗದ ಮೇಲೆ ಯಶಸ್ವಿಯಾಗಿ ತಂದಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ನೃತ್ಯ ಸರಣಿ-ಮಾಲಿಕೆ 9 ‘ನಾಟ್ಯ ಮೋಹನ ನವತ್ಯುತ್ಸಹ’ | ಸೆಪ್ಟೆಂಬರ್ 21
    Next Article ಮೂಡ್ನಾಕೂಡು ಚಿನ್ನಸ್ವಾಮಿ ಜನ್ಮದಿನಾಚರಣೆ ಮತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ | ಸೆಪ್ಟೆಂಬರ್ 22
    roovari

    Comments are closed.

    Related Posts

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    ಏಳು ಮಂದಿ ಸಾಧಕರಿಗೆ ಹಾಗೂ ಒಂದು ಸಂಸ್ಥೆಗೆ ‘ಸಂದೇಶ ಪ್ರಶಸ್ತಿ’ ಪ್ರಕಟ

    January 10, 2026

    ಮೈಸೂರಿನಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2026’ | ಜನವರಿ 11ರಿಂದ 18

    January 9, 2026

    ಸಂಭ್ರಮದಿಂದ ಸಂಪನ್ನಗೊಂಡ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’

    January 7, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.