ಧಾರವಾಡ : ಸಾಹಿತ್ಯ ಗಂಗಾ ಸಂಸ್ಥೆಯು 2024ನೆಯ ಸಾಲಿನ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಲೇಖಕಿಯರು, ಪ್ರಕಾಶಕರು ಮತ್ತು ಓದುಗರು ನಿಯಮಾನುಸಾರವಾಗಿ ಕೃತಿಗಳನ್ನು ಕಳುಹಿಸಬಹುದು.
ನಿಯಮಗಳು :
* 2024ರಲ್ಲಿ ಮೊದಲ ಮುದ್ರಣ ಕಂಡ, ಸ್ವತಂತ್ರ ಕಾದಂಬರಿಗಳು ಮಾತ್ರ ಪ್ರಶಸ್ತಿಗೆ ಅರ್ಹ.
* ಅನುವಾದ, ಅನುಸೃಷ್ಟಿ, ರೂಪಾಂತರ, ಪ್ರೇರಣೆ ಅಥವಾ ಸ್ಫೂರ್ತಿ ಪಡೆದ ಕಾದಂಬರಿಗಳಿಗೆ ಅವಕಾಶವಿಲ್ಲ.
* ಒಬ್ಬ ಲೇಖಕ/ಲೇಖಕಿ ಒಂದಕ್ಕಿಂತ ಹೆಚ್ಚು ಕಾದಂಬರಿ ಪ್ರಕಟಿಸಿದ್ದಲ್ಲಿ, ಅವುಗಳಲ್ಲಿ ಅತ್ಯುತ್ತಮವಾದ ಒಂದನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು.
* ಆಸಕ್ತ ಲೇಖಕ/ಕಿಯರು, ಪ್ರಕಾಶಕರು ಮತ್ತು ಓದುಗರು ಕಾದಂಬರಿಯ ಮೂರು ಪ್ರತಿಗಳು, ಲೇಖಕ/ಲೇಖಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಭಾವಚಿತ್ರವನ್ನು ಅಂಚೆ/ಕೊರಿಯರ್ ಮೂಲಕ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
* ಕಾದಂಬರಿಗಳನ್ನು ಕಳಿಸಲು ಕೊನೆಯ ದಿನಾಂಕ 20 ಫೆಬ್ರುವರಿ 2025.
* ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಯ ಫಲಿತಾಂಶವನ್ನು ಎಪ್ರಿಲ್ ತಿಂಗಳಲ್ಲಿ ಪ್ರಕಟಿಸಲಾಗುವುದು.
ನಮ್ಮ ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2 ನೇ ಮೈನ್, ದಾನೇಶ್ವರಿ ನಗರ, ಹಾವೇರಿ. ಮೊ. 9110687473.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವಿಕಾಸ ಹೊಸಮನಿ – 9110687473, ಸುಭಾಷ್ ಪಟ್ಟಾಜೆ – 9645081966 ಮತ್ತು ಸೋಮನಾಥ ಶೇಷಗಿರಿ – 8197899849