ಪುತ್ತೂರು : ವಿಶ್ವ ನೃತ್ಯ ದಿನವನ್ನು ಮೊದಲ ಬಾರಿಗೆ ಪುತ್ತೂರಿನಲ್ಲಿ ಪ್ರಾರಂಭಿಸಿದ ಕೀರ್ತಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯದ್ದು. 2016 ಏಪ್ರಿಲ್ 29ರಂದು ಪ್ರಾರಂಭಿಸಿ ನಿರಂತರವಾಗಿ 10 ವರ್ಷಗಳ ಕಾಲ ಆಚರಿಸಿ ಇದೀಗ ಅದರ ದಶಮಾನೋತ್ಸವವನ್ನು ನೃತ್ಯಾಂತರಂಗದ 140ನೇ ಸರಣಿಯಲ್ಲಿ ಬಹಳ ವಿಜೃಂಭಣೆಯಿಂದ ದಿನಾಂಕ 29 ಏಪ್ರಿಲ್ 2026ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಸಿತು.


ಸಂಸ್ಥೆಯ 47 ವಿದ್ಯಾರ್ಥಿಗಳು ವಿವಿಧ ಶಾಖೆಗಳಿಂದ ವಿವಿಧ ತಂಡಗಳಲ್ಲಿ ಅನೇಕ ನೃತ್ಯಗಳನ್ನು ಪ್ರಸ್ತುತಪಡಿಸಿದರು. ವಿವೇಕಾನಂದ ಸಿ.ಬಿ.ಎಸ್.ಇ. ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಸಂತಿ ಕೆದಿಲರವರು ಅಭ್ಯಾಗತರಾಗಿ ಸಂಸ್ಥೆಗೆ ಶುಭ ಕೋರುತ್ತಾ ನೃತ್ಯದ ಮಹತ್ವವನ್ನು ತಿಳಿಸಿದರು.

ಸಂಸ್ಥೆಯ ವಿದ್ಯಾರ್ಥಿನಿ ತೇಜಸ್ವಿ ಅಂಬೆಕಲ್ಲು ಕಾರ್ಯಕ್ರಮದ ನಿರೂಪಣೆಗೈದರು. ವಿದುಷಿ ಪ್ರೀತಿಕಲಾ ಓಂಕಾರ ನಾದ, ವಿದ್ವಾನ್ ಗಿರೀಶ್ ಕುಮಾರ್ ಶಂಖನಾದ, ಕುಮಾರಿ ಇಂಚರಾ ಪ್ರಾರ್ಥನೆ, ಕುಮಾರಿ ಅಪರಾಜಿತಾ ಪಂಚಾಂಗ ವಾಚನಗೈದರು. ಗುರು ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಗೃದರು.

