ಬೆಂಗಳೂರು : ಎಸ್.ವಿ.ಎನ್. ಮ್ಯೂಜಿಕ್ ಅಕಾಡೆಮಿ ಮತ್ತು ಎಂ.ಡಿ.ಎನ್.ಡಿ. ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ವಿಶ್ವ ಸಂಗೀತ ದಿನಾಚರಣೆಯನ್ನು ದಿನಾಂಕ 20 ಮತ್ತು 21 ಜೂನ್ 2026ರಂದು ಸಂಜೆ 4-15 ಗಂಟೆಗೆ ಬೆಂಗಳೂರಿನ ಸಂಜಯ್ ನಗರದ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 20 ಜೂನ್ 2026ರಂದು ವಿದುಷಿ ಪದ್ಮ ಅಡಿಗ ಇವರ ಹಾಡುಗಾರಿಕೆಗೆ ವಿದ್ವಾನ್ ಕುಶಾಲ್ ಬಿ.ಆರ್. ವಯೋಲಿನ್ ಹಾಗೂ ವಿದ್ವಾನ್ ನರಸಿಂಹನ್ ರಾಮಸ್ವಾಮಿ ಅಯೆಂಗಾರ್ ಇವರ ಮೃದಂಗಂನಲ್ಲಿ ಸಹಕರಿಸಲಿದ್ದಾರೆ. ವಿದ್ವಾನ್ ಸಿಕ್ಕಿಲ್ ಗುರುಚರಣ್ ಇವರ ಹಾಡುಗಾರಿಕೆಗೆ ವಿದುಷಿ ಎಚ್.ಎಂ. ಸ್ಮಿತಾ ವಯೋಲಿನ್, ವಿದ್ವಾನ್ ತುಮ್ ಕೂರ್ ಬಿ. ರವಿಶಂಕರ್ ಮೃದಂಗಂ ಮತ್ತು ವಿದ್ವಾನ್ ಜಿ. ಗುರುಪ್ರಸನ್ನ ಇವರು ಕಾಂಜೀರದಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 21 ಜೂನ್ 2026ರಂದು ‘ಸಪ’ ಮೇಳದವರಿಂದ ವಾದ್ಯ ಸಂಗೀತ ಹಾಗೂ ಕರ್ನಾಟಿಕ್ ಕ್ವಾರ್ಟೆಟ್ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಶ್ರೇಯ ದೇವನಾಥ್ ಎಲೆಕ್ಟ್ರಿಕ್ ವಯೋಲಿನ್, ವಿದ್ವಾನ್ ಮೈಲೈ ಎಂ. ಕಾರ್ತಿಕೇಯನ್ ನಾದಸ್ವರಂ, ವಿದ್ವಾನ್ ಪ್ರವೀಣ ಸ್ಪರ್ಶ ಇವರು ಮೃದಂಗಂ ಮತ್ತು ವಿದ್ವಾನ್ ಗುಮ್ಮಿಡಿಪೂಂಡಿ ಆರ್. ಜೀವ ಇವರು ತವಿಲ್ ನುಡಿಸಲಿದ್ದಾರೆ.

