Subscribe to Updates

    Get the latest creative news from FooBar about art, design and business.

    What's Hot

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಧಾರವಾಡದ ಅಭಿನಯ ಭಾರತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ
    Awards

    ಧಾರವಾಡದ ಅಭಿನಯ ಭಾರತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ

    March 30, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ನಾಟಕ ಸಂಸ್ಥೆ ಅಭಿನಯ ಭಾರತಿ ಧಾರವಾಡದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಗೃಹದಲ್ಲಿ ದಿನಾಂಕ 27 ಮಾರ್ಚ್ 2026ರಂದು ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

    ಈ ವರ್ಷದ ‘ಅಭಿನಯ ಭಾರತಿ ರಂಗಪ್ರಶಸ್ತಿ’ ಸ್ವೀಕರಿಸಿದ ಖ್ಯಾತ ನಟ, ನಿರ್ದೇಶಕ, ರಂಗಕರ್ಮಿ, ಪತ್ರಕರ್ತ ಡಾ. ಬಂಡು ಕುಲಕರ್ಣಿ ಮಾತನಾಡುತ್ತಾ “ಹೇಗೆ ದಿನಪತ್ರಿಕೆಗಳು ಹಳೆಯ ಓದುಗರನ್ನು ಉಳಿಸಿಕೊಂಡು ಹೊಸ ಹೊಸ ಓದುಗರನ್ನು ಆಕರ್ಷಿಸಲು ಪ್ರಯತ್ನಿಸುವವೋ ಅದೇ ರೀತಿಯಲ್ಲಿ ರಂಗಭೂಮಿ ಸಹ ತನ್ನ ಹಳೆಯ ಪ್ರೇಕ್ಷಕರನ್ನು, ನೋಡುಗರನ್ನು ಉಳಿಸಿಕೊಂಡು, ಹೊಸ ಹೊಸ ಪ್ರೇಕ್ಷಕರನ್ನು, ನೋಡುಗರನ್ನು ರಂಗಭೂಮಿಯತ್ತ ಸೆಳೆಯುವ, ಆಕರ್ಷಿಸುವ ನಿರಂತರ ಪ್ರಯತ್ನ ಮಾಡಬೇಕಾಗಿದೆ.” ಎಂದು ಹೇಳಿದರು.

    ಮುಖ್ಯ ಅತಿಥಿ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ ರಿಜಿಸ್ಟರ್ ಡಾ. ಬಸವರಾಜ ಅನಾಮಿ ಮಾತನಾಡುತ್ತಾ “ರಂಗಭೂಮಿಯ ಹಳೆಯ ದಿನಗಳನ್ನು ನಾವು ನೋಡಿದ್ದೇವೆ. ಈಗಿನ ಡಿಜಿಟಲ್ ಯುಗದಲ್ಲಿ ಯಾವ್ಯಾವ ರೀತಿಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ನಮ್ಮ ರಂಗಭೂಮಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತಗೊಳಿಸುವ ಬಗೆಯನ್ನು ಅಭ್ಯಸಿಸಬೇಕಾಗಿದೆ. ಯುವ ಜನಾಂಗ ರಂಗಭೂಮಿಯತ್ತ ಬರಲು ಈ ಹೊಸ ಮಾಧ್ಯಮಗಳು ಪರಿಣಾಮಕಾರಿ ಯಶಸ್ಸು ನೀಡಬಹುದು” ಎಂದು ಹೇಳಿದರು.

    ಪ್ರಶಸ್ತಿ ವಿಜೇತ ಡಾ. ಬಂಡು ಕುಲಕರ್ಣಿ ಅವರು ತಮಗೆ ನೀಡಿದ ಪ್ರಶಸ್ತಿಯ ಹಣವನ್ನು ಅಭಿನಯ ಭಾರತಿಗೆ ಮರಳಿ ನೀಡಿ “ನನಗೆ ನನ್ನ ಪ್ರಾರಂಭದ ದಿನಗಳಲ್ಲಿ ನಿರ್ದೇಶನ, ನಟನೆಗೆ ಅವಕಾಶ ನೀಡಿ, ಅನ್ನ ಮತ್ತು ಅನುಭವ ನೀಡಿದ ಸಂಸ್ಥೆಗೆ ಸದಾ ಆಭಾರಿ” ಎಂದು ಹೇಳಿದರು. ಡಾ. ಬಸವರಾಜ ಅನಾಮಿಯವರು ಸಹ ತಮಗೆ ನೀಡಿದ ಗೌರವ ಧನವನ್ನು ಮರಳಿ ಅಭಿನಯ ಭಾರತಿಗೆ ನೀಡಿದರು.

    ಅರವಿಂದ ಕುಲಕರ್ಣಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ವಿನಾಯಕ ನಾಯಕರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವೇದಿಕೆಯಲ್ಲಿ ವಿಶ್ವನಾಥ ಕೋಳಿವಾಡ ಅವರು ಉಪಸ್ಥಿತರಿದ್ದರು. ವೀರೇಶ ಹೊಸಮನಿ ಪ್ರಾರ್ಥನೆ ಮಾಡಿದರು. ಸುನಿತಾ ಅರಬಳ್ಳಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಹರ್ಷ ಡಂಬಳ, ನಿವೃತ್ತ ಮುಖ್ಯ ಇಂಜಿನಿಯರ್ ನಾರಾಯಣ, ಡಾ. ವೀರಣ್ಣ, ಡಾ. ಮೃತ್ಯುಂಜಯ ಕಪಾಲಿ, ಡಾ. ವಾಸುದೇವ ಪರ್ವತಿ, ಡಾ. ಹ.ವೆಂ. ಕಾಖಂಡಿಕಿ, ಉಮೇಶ್ ನಾಯಕ, ಡಾ. ಎಮ್.ಆರ್. ಪಾಟೀಲ, ಸುನಿಲ ಬಾಗೇವಾಡಿ, ಸಮೀರ ಜೋಶಿ, ಆರಾಧ್ಯ, ಪ್ರಮೋದ್ ವೈದ್ಯ, ಮಾಲತೇಶ ಕತ್ತಿ ಮೊದಲಾದವರು ಉಪಸ್ಥಿತರಿದ್ದರು.

    award baikady felicitation Literature roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿಯವರಿಂದ ‘ಪಾರ್ಟಿ’ ನಾಟಕ ಕೃತಿ ಲೋಕಾರ್ಪಣೆ
    Next Article ಕೊಡೆತ್ತೂರು ಗುತ್ತಿನ ಚಾವಡಿಯಲ್ಲಿ ‘ಗುತ್ತುಗೊಂಜಿ ಕಲತ ಸುತ್ತು’ ಕಾರ್ಯಕ್ರಮ
    roovari

    Add Comment Cancel Reply


    Related Posts

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026

    ಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ

    May 15, 2026

    ಸಂತ ಅಲೋಶಿಯಸ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡ ‘ವಿಂಚ್ಣಾರ್ ಕಾಣಿಯೊ’

    May 15, 2026

    ಪುಸ್ತಕ ವಿಮರ್ಶೆ | ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ‘ಕೃತಿ ಸಂಕೀರ್ಣ’

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.