Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ

    June 13, 2026

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ಕಲಾಂಗಣದಲ್ಲಿ ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪ ಶಿಬಿರ ಆರಂಭ

    June 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಾಹಿತಿ ದಿ. ಯಶವಂತಿ ಸುವರ್ಣ ಇವರ ಸಂಸ್ಮರಣೆ ಹಾಗೂ ಕೃತಿ ವಿಮರ್ಶೆ ಕಾರ್ಯಕ್ರಮ
    Literature

    ಸಾಹಿತಿ ದಿ. ಯಶವಂತಿ ಸುವರ್ಣ ಇವರ ಸಂಸ್ಮರಣೆ ಹಾಗೂ ಕೃತಿ ವಿಮರ್ಶೆ ಕಾರ್ಯಕ್ರಮ

    September 23, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯಿಂದ ಸಾಹಿತಿ ದಿವಂಗತ ಯಶವಂತಿ ಸುವರ್ಣ ಇವರ ಸಂಸ್ಮರಣೆ ಹಾಗೂ ಕೃತಿ ವಿಮರ್ಶೆ ಕಾರ್ಯಕ್ರಮವು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 16-09-2023ರಂದು ಜರುಗಿತು.

    “ಯಶವಂತಿ ಸುವರ್ಣ ಅವರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ರಂಗದಲ್ಲಿ ಕ್ರಿಯಾಶೀಲರಾಗಿದ್ದು ತಮ್ಮ ಸ್ತ್ರಿಪರ ಚಿಂತನೆಯಿಂದ ಜನಪ್ರಿಯರಾಗಿದ್ದರು” ಎಂದು ಪ್ರಸ್ತಾವಿಕ ನುಡಿಗಳಲ್ಲಿ ಸುಲೋಚನಾ ತಿಲಕ್ ಇವರು ನುಡಿದರು. ಯಶವಂತಿ ಸುವರ್ಣರ ‘ದಾರಿ’ ಕಥಾ ಸಂಕಲನದ ವಿಮರ್ಶೆ ಮಾಡಿದ ಶ್ಯಾಮಲಾ ಕುಮಾರಿ ಬೇವಿಂಜೆ ಇವರು “ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಯಶವಂತಿಯವರಂತಹ ಹೆಣ್ಣು ಮಗಳು ಸಮಾಜದ ಓರೆ ಕೋರೆಗಳು, ರಾಜಕೀಯ ತಂತ್ರಗಳು, ಅಧಿಕಾರಶಾಹಿ, ಕಾಮ ಪ್ರೇಮಗಳ ಕುರಿತು ದಿಟ್ಟವಾಗಿ ತೆರೆದುಕೊಳ್ಳುವುದು ಅಚ್ಚರಿ ಮೂಡಿಸಿತು” ಎಂದರು.

    ಅವರ ತುಳು ಕೃತಿಗಳ ಬಗ್ಗೆ ಮಾತನಾಡಿದ ಡಾ.ಸುಮತಿ ಪಿ. ಇವರು “ಯಶವಂತಿ ಸುವರ್ಣರಿಂದ ತುಳುನಾಡಿನ ಪರಂಪರೆ ಮತ್ತು ದೈವಗಳ ಕುರಿತು ಅಧ್ಯಯನ ಯೋಗ್ಯ ರಚನೆ ಆಗಿದೆ” ಎಂದರು. ಅವರ ಆತ್ಮಕತೆ ‘ಪಶ್ಚಿಮಕ್ಕೆ ವಾಲಿದ ಸೂರ್ಯ’ದ ಕುರಿತು ಮಾತನಾಡಿದ ಲೇಖಕಿ ಸಾವಿತ್ರಿ ಮನೋಹರ್ “ಯಶವಂತಿಯವರು ತನ್ನ ಜೀವನವನ್ನು ಎದುರಿಸಿದ ರೀತಿ, ಜೀವನಾನುಭೂತಿಯ ಸಂಪ್ರೀತಿ, ಪ್ರಕೃತಿಯೊಂದಿಗಿನ ಸಾಹಚರ್ಯ ಮುಂತಾದ ವಿಚಾರಗಳ ಕುರಿತು ಬೆಳಕು ಚೆಲ್ಲಿದರು”. ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆಯವರು “ನುಡಿದಂತೆ ನಡೆದು ಸಮಾಜಕ್ಕೆ ಮಾದರಿಯಾದ ಯಶವಂತಿ ಸುವರ್ಣರ ಎಲ್ಲಾ ಕೃತಿಗಳು 60ರ ದಶಕದಲ್ಲಿ ಸ್ತ್ರೀ ಸಂವೇದನೆಗೆ ಹಿಡಿದ ಕೈಕನ್ನಡಿಯಂತಿದೆ” ಎಂದರು. ಗಾಯತ್ರಿ ವಿಜಯೇಂದ್ರ ಸ್ವಾಗತಿಸಿ, ಕಾರ್ಯದರ್ಶಿ ಮಾಲತಿ.ಜಿ.ಪೈಯವರು ನಿರೂಪಿಸಿ, ಶೈಲಜ ಹೆಗ್ಡೆಯವರು ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನಲ್ಲಿ ಮನಸೆಳೆದ ‘ಲೀಲಾ ನಾಟ್ಯ ಕಲಾವೃಂದ’ ದ ‘ನವರಸ ರಾಮಾಯಣ’
    Next Article ಬಂಟ್ವಾಳದಲ್ಲಿ ಶ್ರಾವಣ ಮಾಸದ ತಾಳಮದ್ದಳೆ ಸೇವೆಯ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ‘ವಿವೇಕ ಸ್ಮೃತಿ’ ಸರಣಿ ಉಪನ್ಯಾಸ ಕಾರ್ಯಕ್ರಮದ 29ನೆಯ ಸಂಚಿಕೆ

    June 13, 2026

    ಸೃಜನಶೀಲ ಸಾಹಿತ್ಯ ಸೇವೆಗೆ ಸಂದ ಗೌರವ

    June 13, 2026

    ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಗೆ ಲೇಖಕಿಯ ಆಯ್ಕೆ

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.