ಪುತ್ತೂರು: ಡಿಸೆಂಬರ್ 2023ರಲ್ಲಿ ನಡೆಯಲಿರುವ ಶ್ರೀ ಆಂಜನೇಯ 55ರ ಸಂಭ್ರಮಕ್ಕೆ ಪೂರಕವಾಗಿ ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ’ ಎಂಬ ಕಾರ್ಯಕ್ರಮದಡಿಯಲ್ಲಿ, ಜೂನ್ 22ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್ ಬಟ್ಯಮೂಲೆ, ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಆದಿತ್ಯ ನಾರಾಯಣ ಪಿ.ಎಸ್. ಸಹಕರಿಸಿದರು. ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್ (ಈಶ್ವರ), ಶುಭಾ ಜೆ.ಸಿ. ಅಡಿಗ (ದಾಕ್ಷಾಯಿಣಿ), ದುಗ್ಗಪ್ಪ ಎನ್. (ಭೀಮಸೇನ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
Subscribe to Updates
Get the latest creative news from FooBar about art, design and business.
Next Article ಮುಂಬೈಯಲ್ಲಿ ‘ಗುಸು ಗುಸು ಉಂಡುಗೆ’ | ಜುಲೈ 22ರಿಂದ 30
