ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಇದರ ಸಂಯುಕ್ತ ಯೋಜನೆಯಲ್ಲಿ ಹಮ್ಮಿಕೊಂಡ ಅಧಿಕಮಾಸದ ವಿಶಿಷ್ಟ ಕಾರ್ಯಕ್ರಮ ‘ಯಕ್ಷ ಪುರುಷೋತ್ತಮ 5’ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ದಿನಾಂಕ 01 ಜೂನ್ 2026ರಂದು ‘ಶಿವಭಕ್ತ ವೀರಮಣಿ’ ಆಖ್ಯಾನದೊಂದಿಗೆ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಎಲ್.ಎನ್, ಭಟ್, ಸತೀಶ್ ಇರ್ದೆ, ನಿತೀಶ್ ಎಂಕಣ್ಣ ಮೂಲೆ, ಮುರಳಿಧರ ಕಲ್ಲೂರಾಯ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಹನುಮಂತ (ಭಾಸ್ಕರ್ ಬಾರ್ಯ), ವೀರಮಣಿ (ಗುಡ್ಡಪ್ಪ ಬಲ್ಯ), ಶತ್ರುಘ್ನ (ತಾರಾನಾಥ ಸವಣೂರು), ಈಶ್ವರ (ಮಾಂಬಾಡಿ ವೇಣುಗೋಪಾಲ್ ಭಟ್), ಶ್ರೀರಾಮ (ಅಚ್ಯುತ ಕೋಡಿಬೈಲು) ಸಹಕರಿಸಿದರು. ಭಾಸ್ಕರ್ ಬಾರ್ಯ ಸ್ವಾಗತಿಸಿ, ಟಿ. ರಂಗನಾಥ ರಾವ್ ವಂದಿಸಿದರು.
