ಸವಣೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಹಾಗೂ ಶ್ರವಣರಂಗ ಪ್ರತಿಷ್ಠಾನ ಸವಣೂರು ಇವುಗಳ ಸಂಯೋಜನೆಯಲ್ಲಿ ನಡೆಯುವ ಪವಿತ್ರ ಅಧಿಕ ಮಾಸದಲ್ಲಿ ‘ಶ್ರೀ ಹರಿ ದರ್ಶನ’ ತಾಳಮದ್ದಳೆ ಅಭಿಯಾನ ‘ಯಕ್ಷ ಪುರುಷೋತ್ತಮ’ದ ಆರನೇ ತಾಳಮದ್ದಳೆ ಕೂಟವು ಸವಣೂರು ಶ್ರೀ ವಿಷ್ಣುದೇವಳದಲ್ಲಿ ‘ಭಕ್ತ ಅಂಬರೀಷ’ ಎಂಬ ಆಖ್ಯಾನದೊಂದಿಗೆ ದಿನಾಂಕ 06 ಜೂನ್ 2026ರಂದು ನಡೆಯಿತು.
ಕೂಟದ ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೇನೇರಂಕಿ, ಸತೀಶ್ ಇರ್ದೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮೇಮ್ಮೇಳದಲ್ಲಿ ಭಾಸ್ಕರ ಬಾರ್ಯ (ಅಂಬರೀಷ), ದಿವಾಕರ ಆಚಾರ್ಯ ಗೇರುಕಟ್ಟೆ (ಮಹಾವಿಷ್ಣು), ಗುಡ್ಡಪ್ಪ ಬಲ್ಯ (ದೂರ್ವಾಸ), ತಾರಾನಾಥ ಸವಣೂರು (ದೇವೇಂದ್ರ), ಪ್ರೇಮಲತಾ ರಾವ್ (ವಸಿಷ್ಠ), ಕಿಶೋರಿ ದುಗ್ಗಪ್ಪ ನಡುಗಲ್ಲು (ನಾರದ ಮತ್ತು ಸುದರ್ಶನ), ಶಾರದಾ ಅರಸ್ (ಪ್ರಭಾದೇವಿ), ಭಾರತಿ ರೈ ಅರಿಯಡ್ಕ (ಕೃತ್ಯ) ಸಹಕರಿಸಿದರು.

ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ತಾರಾನಾಥ ಸವಣೂರು ವಂದಿಸಿದರು. ಶ್ರೀ ದೇವಳದ ಅರ್ಚಕ ಗೋಪಾಲಕೃಷ್ಣ ಬಡೆಕ್ಕಿಲ್ಲಾಯ, ವಿಶ್ವಮೂರ್ತಿ ಬಡೆಕ್ಕಿಲ್ಲಾಯ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಮತ್ತು ಸವಣೂರು ಯುವಕ ಮಂಡಲದ ಸದಸ್ಯರು ಸಹಕರಿಸಿದರು. ಸಂಧ್ಯಾ ವೆಂಕಪ್ಪ ಶೆಟ್ಟಿ ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಇವರು ವೆಂಕಪ್ಪ ಶೆಟ್ಟಿಯವರಿಗೆ ಶಾಲು ಹೊದಿಸಿ ಗೌರವಿಸಿದರು. ಚೇತನ್ ಕೋಡಿಬೈಲ್, ಶ್ರೀಧರ ಸುಣ್ಣಾಜೆ, ಗಂಗಾಧರ ಸುಣ್ಣಾಜೆ, ಸತೀಶ್ ಬಲ್ಯಾಯ, ಉಮಾಪ್ರಸಾದ್ ರೈ ನಡುಬೈಲು, ಮಮತಾ ಗೋಪಾಲಕೃಷ್ಣ ಬಡಿಕ್ಕಲಾಯ, ಅರ್ಚಕರಾದ ನಾರಾಯಣ ಬಡಿಕ್ಕಲಾಯ, ಚಂದ್ರಾವತಿ ಸುಣ್ಣಾಜೆ, ಬೆಳಿಯಪ್ಪ ಗೌಡ ಚೌಕಿಮಠ ಮೊದಲಾದವರು ಉಪಸ್ಥಿತರಿದ್ದರು.
