Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಆಳ್ವಾಸ್ ಕಾಲೇಜಿನಲ್ಲಿ ನಡೆದ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ – ಪಂಜ, ಮುಲ್ಲಕಾಡು ಶಾಲೆಗಳಿಗೆ ಪ್ರಶಸ್ತಿ
    Competition

    ಆಳ್ವಾಸ್ ಕಾಲೇಜಿನಲ್ಲಿ ನಡೆದ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ – ಪಂಜ, ಮುಲ್ಲಕಾಡು ಶಾಲೆಗಳಿಗೆ ಪ್ರಶಸ್ತಿ

    February 9, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡಬಿದರೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ ದಿನಾಂಕ 06-02-2024ರ ಮಂಗಳವಾರದಂದು ನಡೆಯಿತು. ಯಕ್ಷರೂಪಕ ಸ್ಪರ್ಧೆಗಳಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ (ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆ) ತಂಡ ಹಾಗೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಪ್ರೊ.ಎಂ.ಎ.ಹೆಗಡೆ ವೇದಿಕೆ) ತಂಡಗಳು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡವು.
    ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ರಾಕೇಶ್ ರೈ ಅಡ್ಕ ನೇತೃತ್ವದ ತಂಡವು ‘ದಶಾವತಾರ’ ಆಖ್ಯಾನಕ್ಕೆ ಪ್ರಥಮ ತಂಡ ಪ್ರಶಸ್ತಿ ಪಡೆಯಿತು.
    ಗುರುಪುರದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ದೀವಿತ್ ಎಸ್. ಕೆ. ಪೆರಾಡಿ ನೇತೃತ್ವದ ತಂಡವು ‘ಶ್ರೀ ರಾಮಾಯಣ ದರ್ಶನಂ’ ಆಖ್ಯಾನಕ್ಕೆ ದ್ವಿತೀಯ ಹಾಗೂ ಹರೇಕಳದ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಅಶ್ವತ್ ಮಂಜನಾಡಿ ನೇತೃತ್ವದ ತಂಡವು ‘ಕ್ಷೀರಾಬ್ಧಿ ಮಥನ’ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ ಪಡೆಯಿತು.
    ಪ್ರೊ.ಎಂ.ಎ.ಹೆಗಡೆ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಿರೀಶ್ ಗಡಿಕಲ್ಲು ನೇತೃತ್ವದ ತಂಡವು ‘ವಿಶ್ವರೂಪ’ ಆಖ್ಯಾನಕ್ಕೆ ಪ್ರಥಮ ಪ್ರಶಸ್ತಿ ಪಡೆಯಿತು.
    ಕೊಲ್ನಾಡು ಮಂಚಿ ಸರಕಾರಿ ಪ್ರೌಢಶಾಲೆಯ ಅಶ್ವತ್ ಮಂಜನಾಡಿ ನೇತೃತ್ವದ ತಂಡವು ‘ಲಕ್ಷ್ಮೀ ಸ್ವಯಂವರ’ ಆಖ್ಯಾನಕ್ಕೆ ದ್ವಿತೀಯ ತಂಡ ಪ್ರಶಸ್ತಿ ಹಾಗೂ ಗುರುಪುರದ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ದೀವಿತ್ ಎಸ್. ಕೆ ಪೆರಾಡಿ ನೇತೃತ್ವದ ತಂಡವು ‘ಶ್ರೀ ಕೃಷ್ಣ ಲೀಲಾಮೃತಂ’ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ ಪಡೆಯಿತು.
    ವಿಜೇತ ತಂಡಗಳಿಗೆ ಪ್ರಥಮ 30 ಸಾವಿರ ರೂಪಾಯಿ, ದ್ವಿತೀಯ 20 ಸಾವಿರ ರೂಪಾಯಿ ಹಾಗೂ ತೃತೀಯ 15 ಸಾವಿರ ರೂಪಾಯಿ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
    ಎರಡೂ ವೇದಿಕೆ ಸೇರಿದಂತೆ ಒಟ್ಟಾರೆ ಶಿಸ್ತಿನ ತಂಡ ಪ್ರಶಸ್ತಿಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆಯ ರಕ್ಷಿತ್ ಶೆಟ್ಟಿ ಪಡ್ರೆ ತಂಡ ಪಡೆಯಿತು. ಈ ತಂಡವು ರೂಪಾಯಿ 10 ಸಾವಿರ ನಗದು ಪ್ರಶಸ್ತಿಗೆ ಪಾತ್ರವಾಯಿತು.
    ಉಳಿದಂತೆ ಯಕ್ಷ ರಂಗು ಮುಖ ವರ್ಣಿಕೆ ಸ್ಪರ್ಧೆಯಲ್ಲಿ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿನಿ ಮಾನ್ಯ ಜೆ ಭಂಡಾರಿ ಪ್ರಥಮ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯ ವಿದ್ಯಾರ್ಥಿನಿ ಶ್ರಾವ್ಯ ಯು. ದ್ವಿತೀಯ, ಹಾಗೂ ಕಿನ್ನಿಗೋಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ ಇಲ್ಲಿನ ಸಾತ್ವಿಕ್ ತೃತೀಯ ಸ್ಥಾನ ಪಡೆದರು.
    ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ವಿಶ್ವ ಮಂಗಳ ಪ್ರೌಡಶಾಲೆ ಕೊಣಾಜೆಯ ವಿದ್ಯಾರ್ಥಿ ಅಭಿನವ ಭಟ್ಟ ಎನ್. ಪ್ರಥಮ, ತಲಪಾಡಿ ದೇವಿ ನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಇಲ್ಲಿನ ವಿದ್ಯಾರ್ಥಿ ಪ್ರಯಾಗ ಜಿ. ಕೊಟ್ಟಾರಿ ದ್ವಿತೀಯ ಹಾಗೂ ಕಾಸರಗೋಡು ಧರ್ಮತಡ್ಕದ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸ್ಕಂದಪ್ರಸಾದ ಎ. ತೃತೀಯ ಸ್ಥಾನ ಪಡೆದರು.
    ಯಕ್ಷಲೇಖನ ಸ್ಪರ್ಧೆಯಲ್ಲಿ ಕಾರ್ಕಳದ ಶ್ರೀ ಮುಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸೌಜನ್ಯ ಪ್ರಥಮ, ಮೂಡುಬಿದಿರೆಯ ಜೈನ ಪ್ರೌಢಶಾಲೆ ವಿದ್ಯಾರ್ಥಿನಿ ಅಸ್ಮಿ ದ್ವಿತೀಯ ಹಾಗೂ ಹಳೆಯಂಗಡಿ ತೋಕೂರಿನ ಡಾ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಸ್ಕೂಲಿನ ವಿದ್ಯಾರ್ಥಿನಿ ಸಾದ್ವಿ ತೃತೀಯ ಸ್ಥಾನ ಪಡೆದರು.
    ಯಕ್ಷ ಸ್ವಗತ ಮಾತುಗಾರಿಕೆ ಸ್ಪರ್ಧೆಯಲ್ಲಿ ಮಾರುತಿ ವಿದ್ಯಾಕೇಂದ್ರ ತುಮಕೂರುವಿನ ವಿದ್ಯಾರ್ಥಿ ಸಂದೃತ್ ಶರ್ಮಾ ಪ್ರಥಮ, ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳದ ವಿದ್ಯಾರ್ಥಿನಿ ಲಾವಣ್ಯ ದ್ವಿತೀಯ, ಶಾರದಾ ಶುಭೋದಯ ವಿದ್ಯಾಲಯ ಮೂಡುಶೆಡ್ಡೆಯ ವಿದ್ಯಾರ್ಥಿ ಚಿನ್ಮಯ ಕೃಷ್ಣ ಉಳಿತ್ತಾಯ ತೃತೀಯ ಸ್ಥಾನ ಪಡೆದರು.
    ಯಕ್ಷ ಜ್ಞಾನ ಪರೀಕ್ಷಾ ಪಂಥ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನದ ವಿದ್ಯಾರ್ಥಿನಿ ಸಾತ್ವಿ ಪ್ರಥಮ, ಉಡುಪಿಯ ವಳಕಾಡುವಿನ ಜಿ. ಎಚ್. ಎಸ್. ಶಾಲೆಯ ಮೇದಾ ದ್ವಿತೀಯ ಹಾಗೂ ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರದ ವಿದ್ಯಾರ್ಥಿ ಸುಧನ್ವ, ಕೆ. ತೃತೀಯ ಸ್ಥಾನ ಪಡೆದರು.
    ಯಕ್ಷ ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಮಚ್ಚಿನದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯರಾದ ಹಸ್ತ ಪಿ.ಸಿ. ಮತ್ತು ಕುಶಿ ಪ್ರಥಮ, ಹರೇಕಳ ಹಿರಿಯಂಗಡಿಯ ಎಸ್.ಎನ್.ವಿ. ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಆಶ್ರಿತಾ ಮತ್ತು ಸಾನ್ವಿಕಾ ದೇವಾಡಿಗ ದ್ವಿತೀಯ ಹಾಗೂ ಬೆಳ್ತಂಗಡಿಯ ಮಚ್ಚಿನದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಣಿತ್ ಜೆ ಮತ್ತು ಕೌಶಿಕ್ ಶೆಟ್ಟಿ ತೃತೀಯ ಸ್ಥಾನ ಪಡೆದರು.
    ವಿಜೇತ ತಂಡ ಹಾಗೂ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ “ಯಕ್ಷಗಾನ ಜ್ಞಾನವನ್ನು ನೀಡುತ್ತದೆ’. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಸಕ್ತ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಕಲೆಯ ಉಳಿವಿಗೆ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಮನೋಸ್ಥೈರ್ಯ, ಆತ್ಮಬಲ, ರೂಢಿಸಿಕೊಳ್ಳಲು ಸಹಕಾರಿಯಾಗಿರುವ ಯಕ್ಷಗಾನ ಭೂತ, ಭವಿಷ್ಯ ಹಾಗೂ ವರ್ತಮಾನಗಳಿಗೂ ಉತ್ತಮ ಜ್ಞಾನದಾಯಕವಾಗಲಿದೆ.” ಎಂದರು.
    ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್ ಮಾತನಾಡಿ “ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತು ಅಭಿಮಾನಿಗಳಿಗೆ ಇಂತಹ ಕಾರ್ಯಕ್ರಮಗಳು ಶಕ್ತಿ ತುಂಬುವ ಕಾರ್ಯ ಮಾಡುತ್ತವೆ. ಯಕ್ಷಗಾನ ಕಲಾವಿದರಿಗೆ ಇಂತಹ ಪ್ರಯೋಗಗಳು ಕಲಾಸಕ್ತಿಯ ಏಳಿಗೆಗೆ ಸಹಕಾರಿ.” ಎಂದರು.
    ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ, ಕೋಶಾಧಿಕಾರಿ ಸಿ. ಎ. ಸುದೇಶ್ ಕುಮಾರ್ ರೈ, ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ್, ಯಕ್ಷಗಾನದ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರದೀಪ ಆಳ್ವ ಕದ್ರಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಆರತಿ ಆಳ್ವ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ಲಿನಲ್ಲಿ ಯಶಸ್ವಿಗೊಂಡ ‘ದೇಸಿ ಜಗಲಿ ಕಥಾಕಮ್ಮಟ’
    Next Article ಪರಿಚಯ ಲೇಖನ | “ಗಾನ ಇಂಚರ” ಇಂಚರ ಪೂಜಾರಿ ಶಿವಪುರ
    roovari

    Add Comment Cancel Reply


    Related Posts

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026

    ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಾಮ ಸಂಕೀರ್ತನ ಕಾರ್ಯಾಗಾರ | ಜುಲೈ 18, 19, 25 ಮತ್ತು 26

    July 15, 2026

    ಬೆಂಗಳೂರು ಅಲಯೆನ್ಸ್ ವಿಶ್ವವಿದ್ಯಾನಿಲಯದಲ್ಲಿ ತುಳು ಯಕ್ಷಗಾನ ಕಾರ್ಯಾಗಾರ – ವಿಚಾರಗೋಷ್ಠಿ

    July 15, 2026

    ಯಕ್ಷನಂದನ ವರ್ಷಾಚರಣೆಯಲ್ಲಿ ಆಂಗ್ಲ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.