Subscribe to Updates

    Get the latest creative news from FooBar about art, design and business.

    What's Hot

    ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ, ಅನುವಾದ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    December 5, 2025

    ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಪರಿಭ್ರಮಣ 2025’ | ಡಿಸೆಂಬರ್ 06

    December 5, 2025

    46ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2025ರ ಫಲಿತಾಂಶ ಪ್ರಕಟ

    December 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಾಂಗಣದ ನುಡಿ ಹಬ್ಬದಲ್ಲಿ ಯಕ್ಷಗಾನ ಕಲಾವಿದ ದಿ. ಜಲಂಧರ ರೈ ಸಂಸ್ಮರಣೆ
    Commemoration

    ಯಕ್ಷಾಂಗಣದ ನುಡಿ ಹಬ್ಬದಲ್ಲಿ ಯಕ್ಷಗಾನ ಕಲಾವಿದ ದಿ. ಜಲಂಧರ ರೈ ಸಂಸ್ಮರಣೆ

    November 29, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ 13ನೇ ವರ್ಷದ ನುಡಿ ಹಬ್ಬದಲ್ಲಿ ಐದನೇ ದಿನ ಯಕ್ಷಗಾನ ಕಲಾವಿದ, ಶಿಕ್ಷಕ, ಕ್ರೀಡಾಪಟು ಮತ್ತು ಸಮಾಜ ಸೇವಕ ದಿ. ಜಲಂಧರ ರೈ ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 27 ನವೆಂಬರ್ 2025ರಂದು ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷರಾದ ಭಾಸ್ಕರ ರೈ ಕುಕ್ಕುವಳ್ಳಿ “ಸಮಾಜದಲ್ಲಿ ಹೆಸರು, ಕೀರ್ತಿ, ಸ್ಥಾನ-ಮಾನ, ಗೌರವಗಳಿಗಾಗಿ ಸೇವೆ ಮಾಡುವವರು ಬಹಳ. ಆದರೆ ನಿಸ್ಪ್ರಹತೆಯಿಂದ ತಳಮಟ್ಟದ ಕಾರ್ಯಕರ್ತರಾಗಿ ದುಡಿಯುವವರೇ ನಿಜವಾದ ಸಮಾಜ ಸೇವಕರು. ಯಕ್ಷಗಾನ, ಕ್ರೀಡೆ, ಶಿಕ್ಷಣ ಮತ್ತು ಧಾರ್ಮಿಕ ಸಂಘಟನೆಗಾಗಿ ಅವಿರತ ದುಡಿದು ಸಣ್ಣಪ್ರಾಯದಲ್ಲೆ ಅಕಾಲ ಮರಣಕ್ಕೆ ತುತ್ತಾದ ಕೋಟೆಕಾರ್ ಆನಂದಾಶ್ರಮ ಪ್ರೌಢಶಾಲಾ ಶಿಕ್ಷಕ ಸೇರ್ತಾಜೆ ಜಲಂಧರ ರೈ ಅವರದು ಸಂಪೂರ್ಣ ಸಮಾಜಕ್ಕಾಗಿ ಸಮರ್ಪಿತ ಬದುಕಾಗಿತ್ತು. ಜಲಂಧರ ರೈ ಅವರೊಂದಿಗೆ ಪುತ್ತೂರಿನಲ್ಲಿ ಕಳೆದ ಬಾಲ್ಯದ ದಿನಗಳನ್ನು ಸ್ಮರಿಸಿದ ಅವರು ನಾಡು – ಹೊರನಾಡುಗಳಲ್ಲಿ ನಡೆಸಿದ ತಮ್ಮ ಯಕ್ಷಗಾನೀಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.

    ಕೋಡಿಕಲ್ ಶ್ರೀ ಕುರು ಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಚೌಟ ಸಂಸ್ಮರಣ ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಕ್ಷಗಾನ ಕಲಾವಿದ ಹರಿಶ್ಚಂದ್ರ ನಾಯಗ ಮಾಡೂರು ಮತ್ತು ದಿ. ಜಲಂಧರ ರೈಯವರ ಸಹೋದರಿ ಎಸ್. ಪುಷ್ಪಲತಾ ಪ್ರವೀಣ್ ಶೆಟ್ಟಿ ಅಡ್ಯಾರ್ ನುಡಿ ನಮನ ಸಲ್ಲಿಸಿದರು. ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ, ಶಬರಿ ಕ್ಯಾಟರಿಂಗ್ ಮಾಲಕ ಲ. ರಾಜೇಶ್ ಶೆಟ್ಟಿ ಶಬರಿ, ಕಾವೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಎಂ.ಎಸ್. ಶೆಟ್ಟಿ ಸರಪಾಡಿ ಮುಖ್ಯ ಅತಿಥಿಗಳಾಗಿದ್ದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸುಧಾಕರ ರಾವ್ ಪೇಜಾವರ ವಂದಿಸಿದರು. ಕರುಣಾಕರ ಶೆಟ್ಟಿ ಪಣಿಯೂರು, ಲಕ್ಷ್ಮೀ ನಾರಾಯಣ ರೈ ಹರೇಕಳ, ವಾಸಪ್ಪ ಶೆಟ್ಟಿ ಬೆಳ್ಳಾರೆ ಹಾಗೂ ಸುಮಾ ಪ್ರಸಾದ್ ಸಹಕರಿಸಿದರು.

    ಸಪ್ತಾಹದ ಐದನೇ ಆಖ್ಯಾನ ‘ವರುಣಾಧ್ವರ’ ಯಕ್ಷಗಾನ ತಾಳಮದ್ದಳೆಯನ್ನು ಅಂಬುರುಹ ಯಕ್ಷಸದನ ಟ್ರಸ್ಟ್ (ರಿ.) ಬೊಟ್ಟಿಕೆರೆ ತಂಡದವರು ಪ್ರಸ್ತುತಪಡಿಸಿದರು. ರಾಜಾರಾಮ ಹೊಳ್ಳ ಕೈರಂಗಳ, ಮಯೂರ ನಾಯಗ ಮಾಡೂರು, ಸ್ಕಂದ ವರ್ಕಾಡಿ ಹಾಗೂ ಅರ್ಥಧಾರಿಗಳಾಗಿ ಗಣೇಶ್ ಕುಂಜತ್ತೂರು, ಆನಂದ ಸೌರ್ಕುಡೇಲ್, ಗಣೇಶ ಕಾವ ತಲ್ಲಂಗಡಿ, ಬಾಲಕೃಷ್ಣ ಶೆಟ್ಟಿ, ದೀವಿತ್ ಎಸ್‌.ಕೆ. ಪೆರಾಡಿ ಮತ್ತು ರಾಧಾ ಆರ್. ಹೊಳ್ಳ ಭಾಗವಹಿಸಿದರು.

    baikady commemoration roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕೈಯಾಡಿಸಿದ ಸಾಹಿತಿ ವೇಣುಗೋಪಾಲ ಸೊರಬ
    Next Article ಯಕ್ಷಾಂಗಣದಿಂದ ಅಗಲಿದ ಯಕ್ಷಗಾನ ಕಲಾವಿದರಿಗೆ ಸ್ಮರಣಾಂಜಲಿ
    roovari

    Add Comment Cancel Reply


    Related Posts

    ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ, ಅನುವಾದ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    December 5, 2025

    ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಪರಿಭ್ರಮಣ 2025’ | ಡಿಸೆಂಬರ್ 06

    December 5, 2025

    46ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2025ರ ಫಲಿತಾಂಶ ಪ್ರಕಟ

    December 5, 2025

    ಉಡುಪಿಯಲ್ಲಿ ರಜತ ಮಹೋತ್ಸವದ ಪ್ರಯುಕ್ತ ‘ನೃತ್ಯೋಲ್ಲಾಸ’ | ಡಿಸೆಂಬರ್ 6 ಮತ್ತು 7

    December 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.