ಬೆಂಗಳೂರು : ಕೆ. ಮೋಹನ್ ನಿರ್ದೇಶನದ ಯಕ್ಷದೇಗುಲ (ರಿ.) ಬೆಂಗಳೂರು ಇವರ ಸಂಯೋಜನೆಯಲ್ಲಿ ‘ಯಕ್ಷಗಾನ ಪ್ರಾತ್ಯಕ್ಷಿಕೆ’ ‘ಯಕ್ಷಾಂತರಂಗ’ವನ್ನು ಪರಿಚಯಿಸುವ ವಿನೂತನ ಕಾರ್ಯಕ್ರಮವನ್ನು ದಿನಾಂಕ 23 ಮೇ 2026ರಂದು ಸಂಜೆ ಗಂಟೆ 5-30ಕ್ಕೆ ಬೆಂಗಳೂರಿನ ಜಯನಗರ 8ನೇ ಹಂತ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕೋಟ ಸುದರ್ಶನ ಉರಾಳ ಇವರು ಸಂಯೋಜನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಲಂಬೋದರ ಹೆಗಡೆ ಭಾಗವತರು, ಸಂಪತ್ ಕುಮಾರ್ ಮದ್ದಳೆ ಮತ್ತು ಕಾರ್ತಿಕ ಧಾರೇಶ್ವರ ಚಂಡೆ ಸಹಕಾರ ನೀಡಲಿದ್ದಾರೆ. ಸುಜಯೀಂದ್ರ ಹಂದೆ, ಪ್ರಿಯಾಂಕ ಕೆ. ಮೋಹನ್, ಕೃಷ್ಣಮೂರ್ತಿ ತುಂಗ, ಶ್ರೀನಾಥ್ ಉರಾಳ, ದಿನೇಶ್ ಕನ್ನಾರ್ ಮತ್ತು ಯಕ್ಷದೇಗುಲದ ವಿದ್ಯಾರ್ಥಿಗಳು ಈ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ 9844008651 ಮತ್ತು 9448510606 ಸಂಖ್ಯೆಗಳನ್ನು ಸಂಪರ್ಕಿಸಿರಿ.

