ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ಇದರ ವತಿಯಿಂದ ‘ಪಠದ ಸಂಧಿ’ (ಲವ ಕುಶ ಕಾಳಗ) ಯಕ್ಷಗಾನ ಬಯಲಾಟವನ್ನು ದಿನಾಂಕ 30 ಆಗಸ್ಟ್ 2026ರಂದು ಸಂಜೆ 4-00 ಗಂಟೆಗೆ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಭಾಗವತರು ಶ್ರೀ ಉಮೇಶ್ ಸುವರ್ಣ ಗೋಪಾಡಿ, ಶ್ರೀ ನಾಗರಾಜ್ ಶಂಕರನಾರಾಯಣ, ಮದ್ದಳೆ : ಶ್ರೀ ಬಸವ ಮುಂಡಾಡಿ, ಚಂಡೆ : ಶ್ರೀ ಕೃಷ್ಣಮೂರ್ತಿ ಬಗ್ವಾಡಿ ಹಾಗೂ ಮುಮ್ಮೇಳದಲ್ಲಿ ವಾಲ್ಮೀಕಿ : ಶ್ರವಂತ್ ಹೊಸನಗರ, ಸೀತೆ : ಸುದರ್ಶನ್ ಹೊನ್ನಾವರ, ಲವ 1 : ಅನೀಶ್ ಕುಂದಾಪುರ, ಕುಶ 1 : ಪ್ರಶಾಂತ್ ಲಕ್ಕುಂಡಿ, ಲವ 2 : ಆಯುಷ್ ಕುಂದಾಪುರ, ಕುಶ 2 : ಹರೀಶ್ ಲಕ್ಕುಂಡಿ, ಶೂರ್ಪನಖಿ : ಸುಪ್ರೀತ್ ಹೊಸನಗರ, ಮಾಯಾ ಶೂರ್ಪನಖಿ : ಕೌಶಿಕ್ ಬಂಟ್ವಾಳ, ವಿಭೀಷಣ : ಸಮರ್ಥ್ ಗದಗ, ಮಂತ್ರಿಗಳು : ರಘು ಗದಗ, ನಿಂಗಪ್ಪ ಗುಲ್ಬರ್ಗ, ಕುಶಾಲ್ ಮೈಸೂರು, ನಾಗರಾಜ್ ಬಾದಾಮಿ ಮತ್ತು ಸೂತ್ರಧಾರಿಗಳು : ದಿಗಂತ್ ಭಟ್ಕಳ, ಪರಿಣಿತ್ ಮಂಡ್ಯ ಮುಂತಾದ ಕಲಾವಿದರು ಸಹಕರಿಸಲಿದ್ದಾರೆ.

